ಕಳೆದ ಒಂದು ವಾರದಿಂದ ಬರೀ ರಕ್ಷಿತ್- ರಶ್ಮಿಕಾ ಅವರ ಬ್ರೇಕ್ಅಪ್ ನದ್ದೇ ಮಾತು.
ರಶ್ಮಿಕಾ ಬಗ್ಗೆ ನೆಗಿಟೀವ್ ಮಾತು ಕೇಳಿ ಬಂದಾಗ ಸೋಶಿಯಲ್ ಮೀಡಿಯಾಕ್ಕೆ ಮರಳಿ ರಕ್ಷಿತ್ ಸ್ಪಷ್ಟನೆ ನೀಡಿದ್ದರು.
ಇದೀಗ ಸ್ವತಃ ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಗ್ಗೆ ಮೌನ ಮುರಿದಿದ್ದಾರೆ.
“ನಾನು ಇಷ್ಟು ದಿನ ಸುಮ್ಮನೇ ಇದ್ದುದಕ್ಕೆ ಕ್ಷಮಿಸಿ. ನಾನು ಅನೇಕ ದಿನದಿಂದ ಗಮನಿಸುತ್ತಿದ್ದೀನಿ. ನನ್ನ ಬಗ್ಗೆ ಸಾಕಷ್ಟು ಕತೆಗಳು, ಲೇಖನಗಳು, ಕಮೆಂಟ್ಸ್ ಹಾಗೂ ಟ್ರೋಲ್ ಮಾಡುತ್ತಿರುವುದನ್ನು ಗಮನಿಸುತ್ತಿದ್ದೀನಿ. ನೀವು ನನ್ನನ್ನು ಈ ರೀತಿ ತೋರಿಸುವುದನ್ನು ನೋಡಿ ನಾನು ಸಾಕಷ್ಟು ನೊಂದಿದ್ದೇನೆ. ಇದಕ್ಕೆ ನಾನು ನಿಮ್ಮನ್ನು ದೂರುವುದಿಲ್ಲ. ಏಕೆಂದರೆ ನೀವು ಇದನ್ನೇ ನಂಬುತ್ತೀರಾ” ಎಂದು ರಶ್ಮಿಕಾ ಹೇಳಿದ್ದಾರೆ.
ಯಾರನ್ನು ಅಥವಾ ಯಾವುದೋ ವಿಷಯಕ್ಕೆ ಸಮರ್ಥಿಸಿಕೊಳ್ಳ ಬೇಕಿಲ್ಲ.
ನನಗೆ, ರಕ್ಷಿತ್ ಅಥವಾ ಚಿತ್ರರಂಗದಲ್ಲಿರುವ ಬೇರೆ ಯಾವುದೇ ವ್ಯಕ್ತಿಗೆ ಈ ರೀತಿ ಸಮಸ್ಯೆಯಾಗಬಾರದು. ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖ ಇದ್ದಂತೆ, ಪ್ರತಿಯೊಂದು ಕತೆಗೂ ಎರಡು ಕತೆಗಳಿರುತ್ತದೆ ಎಂದು ರಶ್ಮಿಕಾ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ಚಿತ್ರರಂಗದಲ್ಲಿ ಕೆಲಸ ಮಾಡುವವರನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೀನಿ. ಅಲ್ಲದೇ ನಾನು ಕನ್ನಡ ಚಿತ್ರಗಳಲ್ಲಿ ನಟಿಸಲು ಮುಂದುವರೆಸುತ್ತೇನೆ. ಯಾವುದೇ ಭಾಷೆಯಾಗಲಿ, ಯಾವುದೇ ಚಿತ್ರರಂಗ ಆಗಲಿ ನಾನು ನನ್ನ ಬೆಸ್ಟ್ ಶಾಟ್ ನೀಡುತ್ತೇನೆ. ನಾನು ಇಲ್ಲೇ ಇರಲು ಬಂದಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.