ವಿರ್ಯಾಲಗುಡ ಮರ್ಯಾದೆ ಹತ್ಯೆ ಪ್ರಕರಣ ಹಸಿರಾಗಿರುವಾಗಲೇ , ಇದರ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಇಂತಹದ್ದೇ ಘಟನೆ ಯತ್ನ ನಡೆದಿದೆ. ಪತ್ನಿ ಎದುರೇ ಪತಿಯನ್ನು ಕೊಲೆ ಮಾಡಲು ಪ್ರಯತ್ನಲಾಗಿದೆ.
ಎರ್ರಗುಡ್ಡದಲ್ಲಿ ಒಂದು ವಾರದ ಹಿಂದಷ್ಟೇ ಮದುವೆಯಾಗಿದ್ದ ಸಂದೀಪ್ ಮತ್ತು ಮಾಧವಿ ಹಿಂಸೆಗೆ ಒಳಗಾದ ಜೋಡಿ.
ಎರ್ರಗುಡ್ಡದ ಗೋಕುಲ್ ಸಿನಿಮಾ ಮಂದಿರಕ್ಕೆ ಬಂದಾಗ ಅಪರಿಚಿತನೊಬ್ಬ ಇವರ ಮೇಲೆ ದಾಳಿ ಮಾಡಿದ್ದಾನೆ. ದಾಳಿಯಿಂದ ಸಂದೀಪ್ ನಕುತ್ತಿಗೆ , ಎದೆಭಾಗ ಸೇರಿದಂತೆ ಇತರೆ ಭಾಗಗಳಿಗೆ ಚಾಕುವಿನಿಂದ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ನೆರವಿಗೆ ಬಂದಿದ್ದರಿಂದ ಸಂದೀಪ್ -ಮಾಧವಿ ಪಾರಾಗಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.