ಕಲರ್ಸ್ ಸಂಸ್ಥೆಯಿಂದ ಸಿನಿಮಾ ಚಾನಲ್ ಬರುತ್ತಿದೆ. ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ಎಂಬ ಎರಡು ಕನ್ನಡ ಚಾನಲ್ ಗಳನ್ನು ಈಗಾಗಲೇ ಶುರುಮಾಡಿರುವ ವಯಾಕಾಮ್ 18 ‘ಕಲರ್ಸ್ ಕನ್ನಡ ಸಿನಿಮಾ’ ಎಂಬ ಹೆಸರಲ್ಲಿ ಹೊಸ ಚಾನಲ್ ಆರಂಭಿಸಲಿದೆ.
ಮನೆ ಮನೆಯ ಚಿತ್ರಮಂದಿರ ಎಂಬ ಘೋಷವಾಕ್ಯದೊಂದಿಗೆ ಈ ಚಾಲನ್ ಸೆಪ್ಟೆಂಬರ್ 24 ರಿಂದ ಪ್ರಸಾರ ಆರಂಭಿಸಲಿದೆ. ಕಲರ್ಸ್ ಕನ್ನಡ ಲೈಬ್ರರಿಯಲ್ಲಿ ಈಗಾಗಲೇ 450ಕ್ಕೂ ಹೆಚ್ಚಿನ ಸಿನಿಮಾಗಳಿವೆ.
ಮೊದಲ ವಾರ ಪ್ರತಿದಿನ ಸಂಜೆ 7ಗಂಟೆಗೆ ಹೊಸ ಸಿನಿಮಾಗಳು ಪ್ರಸಾರವಾಗಲಿದೆ. ಇನ್ನೂ ಥಿಯೇಟರ್ ಗಳಲ್ಲಿರುವ ‘ವಾಸು ನಾನು ಪಕ್ಕಾ ಕಮರ್ಷಿಯಲ್ ‘ ಸಿನಿಮಾ ಚಾನಲ್ ಆರಂಭವಾದ ಮೊದಲ ದಿನ (ಸೆ.24) ಸಂಜೆ 7ಗಂಟೆಗೆ ಪ್ರದರ್ಶನಗೊಳ್ಳಲಿದೆ.