ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುರಿದು ಬೀಳುವುದು ಖಚಿತ ಎಂದು ಹೇಳಲಾಗುತ್ತಿದ್ದು ,ಕಾಂಗ್ರೆಸ್ ಶಾಸಕರು ಮುಂಬೈಗೆ ತೆರಳಿದ್ದಾರೆ. 5 ಮಂದಿ ಶಾಸಕರು ಎಲ್ಲೂ ಹೋಗಿಲ್ಲ , ಬೆಂಗಳೂರಲ್ಲೇ ಇದ್ದಾರೆ ಎಂಬ ಮಾಹಿತಿ ಇದೆ. 16 ಶಾಸಕರು ರಾಜೀನಾಮೆ ನೀಡಿವುದು ಪಕ್ಕಾ ಆದರೆ ಮಾತ್ರ ಬಿಜೆಪಿ ಅಖಾಡಕ್ಕೆ ಧುಮುಕುತ್ತದೆ. ಈ ನಡುವೆ ರಾಜೀನಾಮೆ ನೀಡುವ ಶಾಸಕರ ಸಂಖ್ಯೆ 30 ತಲುಪಿದರೂ ಆಶ್ಚರ್ಯವಿಲ್ಲ. ಆದ್ದರಿಂದ ಸರ್ಕಾರ ಪತನಗೊಂಡು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆಯೇ ಎಂಬ ಪ್ರಶ್ನೆ ಬಲವಾಗಿ ಮೂಡಿದೆ.
ಈ ಮಧ್ಯೆ ಕಾಂಗ್ರೆಸ್ ಶಾಸಕರ ಬಂಡಾಯ, ಆಪರೇಷನ್ ಮುಂಬೈ ಹಿಂದೆ ಪ್ರಬಲ ನಾಯಕರೊಬ್ಬರ ಕೈವಾಡ ಇದೆ ಎಂದು ಹೇಳಲಾಗಿದೆ. ಈ ಮುಖ್ಯವಾದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿದ್ದಾರೆ. ಅವರೇ ಈ ಆಟ ಆಡುತ್ತಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಅತೃಪ್ತಿಯ ಹಿಂದೆ ಸಿದ್ದರಾಮಯ್ಯ ಇದ್ದಾರೆಯೇ ಎಂಬ ಅನುಮಾನ ಮೂಡಿದೆ. ಇದನ್ನು ಅಸ್ತ್ರವಾಗಿಸಿಕೊಂಡು ಜೆಡಿಎಸ್ ಮುಂದೆ ಇಡುವ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.