ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ್ ಅವರಿಗೆ ಬಾಡಿಗಾರ್ಡ್ ಆಗಿದ್ದರು!ಹೀಗಂತ ಸ್ವತಃ ನಾಗಾರ್ಜುನ್ ಅವರೇ ಹೇಳಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ, ನಾನಿ ಮತ್ತು ನಾಗಾರ್ಜುನ್ ಅವರು ಅಭಿನಯದ ದೇವದಾಸ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು.
ಈ ಕಾರ್ಯಕ್ರಮದಲ್ಲಿ ಮಾತಾಡಿದ ನಾಗಾರ್ಜುನ್, ನಾವು ಚಿತ್ರದ ಶೂಟಿಂಗ್ ಮುಗಿಸಿ ಥೈಲ್ಯಾಂಡ್ ನಿಂದ ವಾಪಸ್ಸಾಗುತ್ತಿದ್ದಾಗ, ರಶ್ಮಿಕಾ ನನ್ನ ಪಕ್ಕದಲ್ಲೇ ಕುಳಿತಿದ್ರು. ಮೂರುಗಂಟೆಯ ಪ್ರಯಾಣದಲ್ಲಿ ರಶ್ಮಿಕಾ ನನ್ನ ನಗಿಸುತ್ತಲೇ ಇದ್ರು. ಅಲ್ಲದೆ ಅವರು ನಂಗೆ ಬಾಡಿಗಾರ್ಡ್ ಕೂಡ ಆಗಿದ್ರು, ಫ್ಲೈಟ್ ನಲ್ಲಿ ನಮ್ಮ ಹಿಂದೆ ಕೂತಿದ್ದವರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ರು. ಆಗ ರಶ್ಮಿಕಾ ನನ್ನ ರಕ್ಷಣೆ ಮಾಡೋಕೆ ಅವರ ಮೇಲೆ ಕೈ ಕೂಡ ಮಾಡಿದ್ರು ಅಂತ ಹೇಳಿದ್ದಾರೆ