ಸ್ಯಾಂಡಲ್ ವುಡ್ ಕರಿಚಿರತೆ ದುನಿಯಾ ವಿಜಯ್ ಅವರ ವರ್ತನೆ ಬಗ್ಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿದೆ.
ನವರಸ ನಾಯಕ ಜಗ್ಗೇಶ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಲ್ಲಿ ರಾಮಾಯಣ ರಚಿಸಿ ಮಹನೀಯನಾದ. ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಾಮಾನ್ಯನಾದ.
ದುನಿಯಾ ವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೂರಿ ಬಿಟ್ಟ. ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು. ಇಲ್ಲದಿದ್ದರೆ ನಮ್ಮ ಬೆವರಿಗೂ ಜನರ ಚಪ್ಪಾಳೆಗೂ ಅಪಮಾನ ಮಾಡಿದಂತೆ. ನಶ್ವರ ಜಗಕ್ಕೆ ಗುಣವೇ ಶ್ರೀಮಂತಿಕೆ ಎಂದಿದ್ದಾರೆ ಜಗ್ಗೇಶ್.
ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಿಂದ ರಾಮಾಯಣ ರಚಿಸಿ ಮಹನೀಯನಾದ..
ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಮಾನ್ಯನಾದ #ದುನಿಯವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೋರಿಬಿಟ್ಟ!ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು!ಇಲ್ಲದಿದ್ದರೆ ನಮ್ಮ ಬೆವರಿಗು ಜನರ ಚಪ್ಪಾಳೆಗು ಅಪಮಾನ ಮಾಡಿದಂತೆ.
ನಶ್ವರ ಜಗಕ್ಕೆ ಗುಣವೆ ಶ್ರೀಮಂತಿಕೆ.!— ನವರಸನಾಯಕ ಜಗ್ಗೇಶ್ (@Jaggesh2) September 23, 2018