ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಎಂಟ್ರಿ ಜೋರಾಗಿಯೇ ಆಗುತ್ತಿದೆ. ತೆರೆಮರೆಯಲ್ಲಿ ಹೆಸರಿಲ್ಲದೆ ಕೆಲಸ ಮಾಡಿದವರು ತಮ್ಮ ಅನುಭವದೊಂದಿಗೆ ಮುಂಚೂಣಿಯಲ್ಲಿ ಸದ್ದು ಮಾಡಲು ಬರುತ್ತಿದ್ದಾರೆ. ಇದು ಸ್ಯಾಂಡಲ್ ವುಡ್ ನ ಆರೋಗ್ಯಕರ ಬದಲಾವಣೆ.
ಇದೀಗ ಓಂ ರಘು ಎಂಬ ಯುವ ನಿರ್ದೇಶಕ ಹೊಸ ಅಲೆ ಎಬ್ಬಿಸಲು ಬಂದಿದ್ದಾರೆ. ರಘು ಅವರಿಗೆ ಸಿನಿಮಾ ಹೊಸದಲ್ಲ, ಪೂರ್ಣಪ್ರಮಾಣದ ನಿರ್ದೇಶಕರಾಗಿ ‘ಮುಕ್ತ’ವಾಗಿ ಆ್ಯಕ್ಷನ್ ಕಟ್ ಹೇಳುತ್ತಿರುವುದು ಇದೇ ಮೊದಲು.
ಸಿಪಾಯಿ, ರಾಕ್ಷಸಿ, ಮೊಮ್ಮಗ, ಗರುಡ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾಗಳು ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಓಂ ರಘು ಅವರು ನಿರ್ದೇಶಕರಾಗುತ್ತಿದ್ದಾರೆ. ಬಿಗ್ ಸ್ಕ್ರೀನ್ ಗು ಮುನ್ನ ‘ಮುಕ್ತ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ.ಶೀಘ್ರದಲ್ಲೇ ರಿಲೀಸ್ ಆಗಲಿದೆ.