ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ಕಿರಿಯರ ಗುರು ರಾಹುಲ್ ದ್ರಾವಿಡ್ ಹೇಳಿದ್ದು ನಿಜವಾಗಿದೆ! ಅಷ್ಟಕ್ಕೂ ದ್ರಾವಿಡ್ ಹೇಳಿದ್ದೇನು? ನಿಜವಾಗಿದ್ದೇನು?
ಯಸ್, ಅಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಪಾಕಿಸ್ತಾನಕ್ಕಿಂತಲೂ ಅಫ್ಘಾನಿಸ್ತಾನ ಡೇಂಜರ್ ಎಂಬ ಸಂದೇಶವನ್ನು ನೀಡಿದ್ರು. ದ್ರಾವಿಡ್ ಮಾತ್ರವಲ್ಲದೆ ವಿ.ವಿ.ಎಸ್ ಲಕ್ಷ್ಮಣ್ ಸೇರಿದಂತೆ ಅನೇಕ ಕ್ರಿಕೆಟಿಗರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ರು. ಅದೀಗ ನಿಜವಾಗಿದೆ!
ಸ್ವಲ್ಪ ಯಾಮಾರಿದ್ರೂ ನಾವೆಂಥಾ ಶಾಕ್ ಕೊಡ್ತೀವಿ , ನಮ್ಮ ಜೊತೆ ನಿಮ್ಮ ಆಟ ನಡೆಯಲ್ಲ ಅಂತ ಅಫ್ಘಾನಿಸ್ತಾನ್ ತಂಡ ತೋರಿಸಿಕೊಟ್ಟಿದೆ!
ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತಕ್ಕೆ ಅಫ್ಘಾನಿಗರು ಬಿಗ್ ಶಾಕ್ ನೀಡಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ.
ಮಹಮ್ಮದ್ ಶೆಹಜಾದ್ ಅವರ ಶತಕದ ನೆರವಿನಿಂದ ಅಫ್ಘಾನಿಸ್ತಾನ ನಿಗಧಿತ 50 ಓವರ್ ಗಳಲ್ಲಿ 252 ರನ್ ಗಳನ್ನು ಮಾಡಿತ್ತು. ಗುರಿ ಬೆನ್ನಟ್ಟಿದ ಭಾರತ 49.5 ಓವರ್ ಗಳಲ್ಲಿ ಅಷ್ಟೇ ರನ್ ಗಳಿಸಿ ಆಲ್ ಔಟ್ ಆಯಿತು. ಇದರೊಂದಿಗೆ ಪಂದ್ಯ ರೋಚಕ ಟೈ ನೊಂದಿಗೆ ಅಂತ್ಯವಾಯಿತು.
ರೋಹಿತ್ ಶರ್ಮಾ , ಶಿಖರ್ ಧವನ್ ವಿಶ್ರಾಂತಿ ಪಡೆದಿದ್ದರು. ಮಹೇಂದ್ರ ಸಿಂಗ್ ಧೋನಿ ಮತ್ತೆ ನಾಯಕರಾಗಿ ಕಣಕ್ಕಿಳಿದಿದ್ದರು. ಧೋನಿ ನಾಯಕತ್ವದ 200ನೇ ಪಂದ್ಯ ಇದಾಗಿತ್ತು.