No menu items!
9.3 C
Munich
Wednesday, April 29, 2026

ಪತ್ರಕರ್ತರಿಗೆ ಗುಡ್ ನ್ಯೂಸ್

Must read

ಇದು ಪತ್ರಕರ್ತರಿಗೆ ಗುಡ್ ನ್ಯೂಸ್! ಆಯವ್ಯಯದಲ್ಲಿ ಘೋಷಿಸಿದ್ದ ‘ಮಾಧ್ಯಮ ಸಂಜೀವಿನಿ’ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.

ಪತ್ರಕರ್ತರು ಕೆಲಸದ ವೇಳೆ ಅಪಘಾತಕ್ಕೆ ಈಡಾದಾಗ ಇಲ್ಲವೇ ಇನ್ನೇನಾದರು ಅವಘಡಗಳಾಗಿ ಅಕಾಲಿಕ ಮರಣವನ್ನಪ್ಪಿದರೆ ಈ ಯೋಜನೆಯಡಿ ಮೃತರ ಕುಟುಂಬಕ್ಕೆ 5ಲಕ್ಷ ರೂವರೆಗೆ ಜೀವವಿಮೆ ನೀಡಲಾಗುತ್ತದೆ.‌ ಈ ಜೀವ ವಿಮೆ ಕಂತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ‌ ಮೂಲಕ ಭರಿಸಲಾಗುವುದು. ಪತ್ರಕರ್ತರು ತಮ್ಮ 60 ವರ್ಷ ವಯಸ್ಸಿನ ವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲಾಗುವುದು.


ಪತ್ರಕರ್ತರು ಇಲಾಖೆಯಿಂದ ಮಾನ್ಯತೆ ಪತ್ರವನ್ನು ಪಡೆದಿರಬೇಕು. 25 ವರ್ಷದಿಂದ 60 ನೇ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪತ್ರಕರ್ತರು ವೃತ್ತಿ ನಿರತ ಕೆಲಸದ ಮೇಲೆ ಅಪಘಾತಕ್ಕೆ ಒಳಗಾಗದರೆ ಅಥವಾ ಗಂಭೀರ ಮತ್ತು ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article