ಸ್ಯಾಂಡಲ್ ವುಡ್ ಬ್ಯಾಡ್ ಬಾಯ್ ದುನಿಯಾ ವಿಜಯ್ ಮಕ್ಕಳಿಗೆ ಜೀವ ಬೆದರಿಕೆ ಇದೆ ಎನ್ನಲಾಗಿದೆ.
ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾರೆ ವಿಜಿ .
ಇತ್ತ ವಿಜಿಯ ಇಬ್ಬರು ಪತ್ನಿಯರ ನಡುವೆ ಕಿತ್ತಾಟ ಜಾಸ್ತಿಯಾಗಿದೆ. ಎರಡನೇ ಪತ್ನಿ ಕೀರ್ತಿಗೌಡ ಅವರಿಂದ ಮೊದಲ ಪತ್ನಿ ನಾಗರತ್ನ ಅವರ ಮಕ್ಕಳಿಗೆ ಜೀವ ಬೆದರಿಕೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ.
ಕೀರ್ತಿಗೌಡ ನಮ್ಮನ್ನು ಮತ್ತು ಅಮ್ಮನನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ. ನಮಗೆ ಜೀವ ಬೆದರಿಕೆ ಇದೆ ಎಂದು ನಾಗರತ್ನ ಅವರ ಪುತ್ರಿ ಮೋನಿಕ ಗೌಡ ಹೇಳಿದ್ದಾರೆ.