ಬೆಂಗಳೂರಿನ ರೌಡಿಗಳಿಗೆ ಸಿಂಗಂ ಸಿನಿಮಾ ನೆನಪಿಗೆ ಬರ್ತಾ ಇದೆ. ಯಾಕಂದ್ರೆ, ಮೊನ್ನೆ ಮೊನ್ನೆಯಷ್ಟೇ ಸಿಸಿಬಿ ADGPಯಾಗಿ ಬೆಂಗಳೂರಿಗೆ ಆಗಮಿಸಿರೋ ಖಡಕ್ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ರೌಡಿಗಳ ಬೆವರಿಳಿಸುತ್ತಿದ್ದಾರೆ. ಪ್ರತಿ ದಿನ, ಪ್ರತಿ ಕ್ಷಣ, ರಾಜಧಾನಿಯ ಮೂಲೆ ಮೂಲೆಯಲ್ಲಿರೋ ರೌಡಿ ಲಿಸ್ಟ್ನ್ನ ಸ್ಟಡಿ ಮಾಡುತ್ತಿದ್ದಾರೆ. ರೌಡಿಗಳ ಪರೆಡ್ ನಡೆಸಿ ಖಡಕ್ ವಾರ್ನಿಂಗ್ನ್ನೂ ಕೊಡುತ್ತಿದ್ದಾರೆ.
ಮಂಗಳವಾರ ಅಲೋಕ್ ಕುಮಾರ್ ಅವರು ಬೆಂಗಳೂರಿನ 8 ವಿಭಾಗಗಳ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳಿಗೆ ಬುಲಾವ್ ನೀಡಿದ್ದರು. ಅವರ ಒಂದೇ ಒಂದು ಎಚ್ಚರಿಕೆಗೆ ಕುಖ್ಯಾತ ರೌಡಿಗಳಾದ ಮುಲಾಮ, ವೇಲು, ರಾಮ-ಲಕ್ಷಣ, ರಾಬರಿ ಗಿರಿ, ವೆಂಕಿ ಸೇರಿಂದಂತೆ ದೊಡ್ಡ ದೊಡ್ಡ ರೌಡಿಗಳೆಲ್ಲಾ ಆಗಮಿಸಿದ್ದರು. ಆ ಎಲ್ಲಾ ರೌಡಿಗಳ ಬಗ್ಗೆ ಮಾಹಿತಿ ಪಡೆದ ಅಲೋಕ್ ಕುಮಾರ್, ಇನ್ಮುಂದೆ ಬಾಲ ಮುಚ್ಚಿಕೊಂಡು ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಕಮಕ್ ಕಿಮಕ್ ಅಂದವರಿಗೆ ತಕ್ಕ ಶಾಸ್ತಿಯಾಗುತ್ತೆ ಎನ್ನುವ ವಾರ್ನಿಂಗ್ ಮಾಡಿದ್ದಾರೆ.
ರೌಡಿಶೀಟರ್ಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಡ್ರಿಲ್ ಮಾಡಿದ ಎಡಿಜಿಪಿ ಅಲೋಕ್ ಕುಮಾರ್, ಚಿಕ್ಕ ವಯಸ್ಸಿನಲ್ಲೇ ರೌಡಿಶೀಟರ್ ಪಡೆದ ಕೆಲವರನ್ನ ಮಾತನಾಡಿಸಿದರು. ಇಷ್ಟೊಂದು ಚಿಕ್ಕ ವಯಸ್ಸಿಗೆ ರೌಡಿಸಂ ಮಾಡಿದ್ದೇಕೆ ಎನ್ನುವ ಮಾಹಿತಿ ಪಡೆದು, ಇನ್ಮುಂದೆ ಬದಲಾಗುವಂತೆ ಸಲಹೆಯನ್ನೂ ನೀಡಿದರು. ಒಟ್ಟಾರೆ ಅಲೋಕ್ ಕುಮಾರ್ ಅವರು ಬೆಂಗಳೂರಿಗೆ ಆಗಮಿಸಿದ ದಿನದಿಂದ ರಾಜಧಾನಿಯ ಭೂಗತ ಲೋಕದ ದೊಡ್ಡವರಿಂದ ಸಣ್ಣ ಪುಟ್ಟ ರೌಡಿಗಳು ಕೂಡ ಸೈಲೆಂಟ್ ಆಗಿದ್ದಾರೆ.
ರಾಜಧಾನಿಯಲ್ಲಿ ರಿಯಲ್ ಸಿಂಗಂ ಘರ್ಜನೆ…!
Date: