ದೀಪಾವಳಿಗೆ ಬಿಎಸ್ ಎನ್ ಎಲ್ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ರೆಡಿಯಾಗಿದೆ. 2ಜಿ ಹಾಗೂ 3ಜಿ ಸೇವೆಯಲ್ಲಿರುವ ಬಿಎಸ್ ಎನ್ ಎಲ್ ಇದೇ ನವೆಂಬರ್‌ನಲ್ಲಿ 4 ಜಿ ಸೇವೆ ಆರಂಭಿಸಲಿದೆ.
4 ಜಿ ಸೇವೆ ಜೊತೆಗೆ ಈಗಾಗಲೇ ಅಮೇಜಾನ್ ಪ್ರೈಮ್ ವೀಡಿಯೋ ಜೊತೆ ಒಪ್ಪಂದ ಮಾಡಿಕೊಂಡಿರುವ BSNL ಭಾರಿ ರಿಯಾಯಿತಿ ನೀಡಲು ಮುಂದಾಗಿದೆ. ಇಷ್ಟೇ ಅಲ್ಲ ಟಾರಿಫ್ ಹಾಗೂ ರಿಚಾರ್ಜ್ ಆಫರ್‌ಗಳನ್ನ ನೀಡಲು ನಿರ್ಧರಿಸಿದೆ.
ಬಿಎಸ್ ಎನ್ ಎಲ್ ಸದ್ಯಕ್ಕೆ 4 ಜಿ ಸೇವೆ ಆರಂಭಿಸುತ್ತಿರುವುದು ತೆಲಂಗಾಣದ 2 ಜಿಲ್ಲೆಗಳಲ್ಲಿ. ಇದು ಪ್ರಾಯೋಗಿಕವಾಗಿ. ಮಾರ್ಚ್ 2019ರ ವೇಳೆ ಎಲ್ಲಾ ರಾಜ್ಯಗಳಲ್ಲಿಯೂ ಇದನ್ನು ಪರಿಚಯಿಸಲು ಉದ್ದೇಶಿಸಿದೆ.