ಮಲ್ಯ- ನೀರವ್ ಬಳಿಕ ದೇಶ ಬಿಡ್ತಾರಾ ಅನಿಲ್ ಅಂಬಾನಿ….?

Date:

ಮಲ್ಯ-ನೀರವ್​ ಬಳಿಕ ದೇಶ ಬಿಡ್ತಾರಾ ಅನಿಲ್​ ಅಂಬಾನಿ..?

ವಿಜಯ್​ ಮಲ್ಯ ಆಯ್ತು.. ನೀರವ್​ ಮೋದಿ ಆಯ್ತು.. ಈಗ ದೇಶ ಬಿಟ್ಟು ಹೋಗುವ ಸರದಿ ಅನಿಲ್​ ಅಂಬಾನಿಯದ್ದು..? ಇಂಥಾದ್ದೊಂದು ಪ್ರಶ್ನೆ ಇಡೀ ದೇಶವನ್ನೇ ಕಾಡುತ್ತಿದೆ. ಸಾವಿರಾರು ಕೋಟಿ ಸಾಲ ಮಾಡಿರುವ ಅನಿಲ್​ ಅಂಬಾನಿ ದೇಶ ಬಿಟ್ಟು ಹೋಗ್ತಾರಾ ಎನ್ನುವ ಚರ್ಚೆಯೂ ಆರಂಭವಾಗಿದೆ. ಅಷ್ಟೇ ಅಲ್ಲ, ಅನಿಲ್​ ಅಂಬಾನಿ ದೇಶ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಸ್ವತಃ ಸುಪ್ರಿಂ ಕೋರ್ಟ್​ನಲ್ಲಿ ಅರ್ಜಿಯೊಂದು ದಾಖಲಾಗಿದೆ.
ಅಚ್ಚರಿ ಎನಿಸಿದರೂ ಇದು ಸತ್ಯ. ರಿಲಯನ್ಸ್​ ಸಂಸ್ಥೆಯ ಮಾಲೀಕ ಅನಿಲ್​ ಅಂಬಾನಿ ದೇಶ ಬಿಟ್ಟು ಓಡಿ ಹೋಗ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಾರಣ ಇಷ್ಟೆ, ಅನಿಲ್​ ಅಂಬಾನಿ ಒಡೆತನದ ರಿಲಯನ್ಸ್​ ಕಮ್ಯುನಿಕೇಷನ್ಸ್​ ಸಂಸ್ಥೆ ಟೆಲಿಕಾಂ ಉಪಕರಣಗಳ ಪೂರೈಕೆ ಮಾಡುವಂತಾ ಎರಿಕ್ಸನ್​ ಕಂಪನಿಯಿಂದ ತರಂಗಾತರ ಹಂಚಿಕೆ ಹಾಗೂ ಮೊಬೈಲ್​ ಬಿಡಿ ಭಾಗಗಳ ಮಾರಾಟ ವಹಿವಾಟು ನಡೆಸಿತ್ತು. ಒಟ್ಟು 1,147 ಕೋಟಿ ರೂಪಾಯಿ ಮೊತ್ತದ ವ್ಯವಹಾರದಲ್ಲಿ ರಿಲಯನ್ಸ್​ ಸಂಸ್ಥೆ 557 ಕೋಟಿ ಹಣವನ್ನ ಬಾಕಿ ಉಳಿಸಿಕೊಂಡಿದೆ.
ಈ ಬಗ್ಗೆ ಎರಿಕ್ಸನ್​ ಕಂಪನಿ ಹಲವಾರು ಬಾರಿ ಬಾಕಿ ಪಾವತಿಸುವಂತೆ ಮನವಿ ಮಾಡಿತ್ತು. ಆದರೆ ಅನಿಲ್ ಅಂಬಾನಿ ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಎರಿಕ್ಸನ್​ ಸಂಸ್ಥೆ ಸುಪ್ರಿಂ ಕೋರ್ಟ್​ ಮೆಟ್ಟಿಲೇರಿದೆ. ರಿಲಯನ್ಸ್​ ಕಮ್ಯುನಿಕೇಷನ್ಸ್ ಸಂಸ್ಥೆ ನಷ್ಟದಲ್ಲಿ ಮುಳುಗಿದ್ದು, ಸಂಸ್ಥೆಯ ಅನಿಲ್​ ಅಂಬಾನಿ ಮಾಲೀಕ ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೇ, ಅನಿಲ್​ ಅಂಬಾನಿ ದೇಶ ಬಿಡುವಂತೆ ತಡೆದು ತಮಗೆ ನೀಡಬೇಕಾದ 557 ಕೋಟಿ ಬಾಕಿ ಹಣವನ್ನ ಕೊಡಿಸುವಂತೆ ಮನವಿ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್​ ಕಮ್ಯುನಿಕೇಷನ್ಸ್​ ಸಂಸ್ಥೆ 60 ದಿನಗಳ ಕಾಲಾವಕಾಶ ಕೋರಿದೆ. ಆದರೆ ಎರಿಕ್ಸನ್ಸ್​ ಕಂಪನಿ ಇದನ್ನ ತಿರಸ್ಕತಿಸಿದೆ. ಯಾಕಂದ್ರೆ, ಅನಿಲ್​ ಅಂಬಾನಿ ಒಟ್ಟು 38 ಕಂಪನಿಗಳಿಗೆ ನೀಡಬೇಕಾದ ಬಾಕಿಯನ್ನ ಇದುವರೆಗೆ ಕೊಟ್ಟಿಲ್ಲ. ಹೀಗಾಗಿ ಅವರಿಂದ ಹಣ ನೀಡಲು ಸಾಧ್ಯವಿಲ್ಲ. ಅವರು ದೇಶ ಬಿಡುವ ಸಾಧ್ಯತೆ ಇದೆ ಎಂದು ಸುಪ್ರಿಂ ಕೋರ್ಟ್​ಗೆ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...