ಮಹಿಳೆಯಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರ ನಡೆದಿದೆ. ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು 25 ವರ್ಷದ ಮಹಿಳೆಯೊಬ್ಬರು 19 ವರ್ಷದ ಮಹಿಳೆ ವಿರುದ್ಧ ದೂರು ನ ನೀಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
19 ವರ್ಷದ ಮಹಿಳೆ ‘ಸೆಕ್ಸ್ ಟಾಯ್’ಗಳನ್ನು ಬಳಸಿ ನನ್ನ ಮೇಲೆ ನಿರಂತರ ಎರಡು ತಿಂಗಳಿಂದ ಅತ್ಯಾಚಾರ ಮಾಡಿದ್ದಾರೆ ಎನ್ನುವುದು 25 ರ ಮಹಿಳೆಯ ಆರೋಪ.
ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದ ಈಶಾನ್ಯ ರಾಜ್ಯದ ಮಜಿಳೆ ದೆಹಲಿಯ ಸೀಮಾಪುರಿ ಪೊಲೀಸ್ ಸ್ಟೇಶನ್ ಗೆ ದೂರು ನೀಡಲು ತೆರಳಿದ್ದಾಳೆ. ಆದರೆ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.
ನಂತರ ಮಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಸೆಕ್ಷನ್ 164 ರ ಅಡಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಮಹಿಳೆ ಮೇಲೆ ಮೊದಲು ಮಹಿಳೆ ಶೋಷಣೆ ಮಾಡಿದ ನಂತರ ಆಕೆಯನ್ನು ಬಿಜಿನಸ್ ಹೆಸರಿನಲ್ಲಿ ಗಲ್ಲಿಯೊಂದಕ್ಕೆ ಕರೆದುಕೊಂಡು ಹೋಗಲಾಗಿದ್ದು ಇಬ್ಬರು ಯುವಕರು ಸಹ ಅತ್ಯಾಚಾರ ಮಾಡಿದ್ದು ವಿಡಿಯೋ ಶೂಟ್ ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆ 6 ವಾರದ ಗರ್ಭಿಣಿಯಾಗಿದ್ದು ನ್ಯಾಯಾಲಯದ ಬಳಿ ಅಬಾರ್ಶನ್ ಗೆ ಮನವಿ ಮಾಡಿದ್ದಾಳೆ.
ಆರೋಪಿಗಳಲ್ಲಿ ಒಬ್ಬನಾದ ರಾಹುಲ್ ಎಂಬಾತನನ್ನು ಬಂಧಿಸಿದ್ದಾರೆ.