ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಅವರ ಆಟದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಕಂಡೆ ಎಂದು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಪೃಥ್ವಿ ಶಾ ಅವರ ಆಟದಲ್ಲಿ ಸೆಹ್ವಾಗ್ ಅವರಂತೆ ವೇಗವಾಗಿ ರನ್ ಗಳಿಸಿದ್ದನ್ನು, ಸಚಿನ್ ಅವರ ಕಲಾತ್ಮಕತೆಯನ್ನು ಕಂಡಿದ್ದೇನೆ ಎಂದು ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಪೃಥ್ವಿ ಶಾ 154 ಎಸೆತಗಳಲ್ಲಿ 19 ಬೌಂಡರಿ ಮೂಲಕ ಆಕರ್ಷಕ 134 ರನ್ ಗಳಿಸಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈ ಶತಕದ ಮೂಲಕ ಪೃಥ್ವಿ ಶಾ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.