ಭೀಮರಾವ್ ಮುರುಗೋಡ್ ಇನ್ನಿಲ್ಲ!

Date:

ಭೀಮರಾವ್​ ಮುರಗೋಡ್​ ಇನ್ನಿಲ್ಲ

ಭಾರತೀಯ ಚಿತ್ರಕಲಾ ಕ್ಷೇತ್ರದ ಮಾಣಿಕ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಭೀಮರಾವ್​ ಮುರಗೋಡ್​ ವಿಧಿವಶರಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್​ನವರಾದ ಭೀಮರಾವ್​ ಮುರಗೋಡ್​ ಅವರು ವಿಶ್ವ ಚಿತ್ರಕಲಾ ಕ್ಷೇತ್ರದಲ್ಲಿ ಅಪೂರಪದ ವ್ಯಕ್ತಿಯಾಗಿದ್ದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ಭೀಮರಾವ್​ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ದೆಹಲಿಯಲ್ಲಿ ವಾಸವಾಗಿದ್ದ ಭೀಮರಾವ್​ ಮುರಗೋಡ್​ ಭಾರತದ ಬಹುತೇಕ ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿಗಳನ್ನ ಎದುರಿನಲ್ಲಿ ಕೂರಿಸಿಕೊಂಡು ಅವರ ಚಿತ್ರಗಳನ್ನ ರಚಿಸಿದ್ದರು. ಭಾರತ ದೇಶದ ದೊಡ್ಡ ದೊಡ್ಡ ಸಿನಿಮಾ ನಟರ ಭಾವಚಿತ್ರಗಳನ್ನ ಕ್ಷಣ ಮಾತ್ರದಲ್ಲಿ ರಚಿಸುತ್ತಿದ್ದರು.
ಭೀಮರಾವ್​ ಮುರಗೋಡ್​ ಅವರ ಚಿತ್ರಕಲಾ ನೈಪುಣ್ಯತೆ ಗೋಕಾಕ್​ನಿಂದ ಆರಂಭವಾಗಿ ಅಮೆರಿಕಾ ದೇಶವನ್ನೂ ತಲುಪಿತ್ತು. ಯಾಕಂದ್ರೆ, 2000ರಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್​ ಅವರ ಕಲಾಕೃತಿಯನ್ನ ಭೀಮ್​ರಾವ್ ರಚಿಸಿದ್ದರು. 1978ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಂದಿನ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಕೃತಿಯನ್ನೂ ಭೀಮರಾವ್ ರಚಿಸಿದ್ದರು. ಆ ಚಿತ್ರ ಕೃತಿಯನ್ನ ಅಂದಿನ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರೇ ಜಿಮ್ಮಿ ಕಾರ್ಟರ್​ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಇನ್ನು ಮದರ್ ಥೆರೇಸಾ, ಪೋಪ್ ಜಾನ್ ಪೌಲ್-2, ಇಂದಿರಾ ಗಾಂಧಿ, ಪಂಡಿತ್ ರವಿಶಂಕರ್, ಅರುಣಾ ಅಸಫ್ ಅಲಿ, ರಾಜಾ ರಾಮಣ್ಣ, ಎಂ.ಎಫ್ ಹುಸೇನ್ ಹೀಗೆ 300ಕ್ಕೂ ಹೆಚ್ಚು ಖ್ಯಾತನಾಮರ ಚಿತ್ರ ಕೃತಿಗಳನ್ನ ಭೀಮರಾವ್ ಮುರಗೋಡ್​ ಅವರು ರಚಿಸಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ ಭೀಮರಾವ್​ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ. 75 ವರ್ಷದ ಭೀಮರಾವ್​ ಅವರು ಇಬ್ಬರು ಪುತ್ರರಾದ ಸ್ವರೂಪ್ ಮುರಗೋಡ್, ಸಾಮ್ರಾಟ್ ಗೌತಮ್ ಹಾಗೂ ಪುತ್ರಿ ಮೊನಾಲಿಸಾ ವಿನಯ್ ಮತ್ತು ಪತ್ನಿ ಶಾಲಿನಿ ಮುರಗೋಡ್ ಅವರನ್ನು ಅಗಲಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...