ಈಗ ರಾಜ್ಯ ಸೇರಿದಂತೆ ನಮ್ ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚು ಮಾರಾಟವಾಗುತ್ತಿದೆ. ಯುವಕರು ಸೇರಿದಂತೆ ಎಲ್ಲಾ ವಯೋಮಾನದವರಿಗೂ ರಾಯಲ್ ಎನ್‌ಫೀಲ್ಡ್ ಬೈಕ್ ಅಂದ್ರೆ ಇಷ್ಟ. ಆದರೆ ಬೈಕ್ ಖರೀದಿಸಿದವರು ಬಹಳ ಎಚ್ಚರವಾಗಿರಬೇಕು. ಕಾರಣ ಕಳ್ಳರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಕಳುವು ಮಾಡೋದು ಬಹಳ ಸುಲುಭ.
ದೆಹಲಿಯ ಮನೋಜ್ ಕುಮಾರ್ ಅನ್ನೋರು ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ ಬೈಕ್ ಕ್ಲಾಸಿಕ್ 350 ಬೈಕ್ ಖರೀದಿಸಿದ್ದರು. ಆದರೆ ಒಂದೇ ವರ್ಷದಲ್ಲಿ ಬೈಕ್ ಇಲ್ಲ. ಮನೆಯ ಮುಂದೆ ನಿಲ್ಲಿಸಿದ್ದ ಮನೋಜ್ ಬೈಕ್ ಕಳ್ಳತನವಾಗಿದೆ . ಕೇವಲ ಎರಡೇ ಎರಡು ನಿಮಿಷದಲ್ಲಿ ಬೈಕ್ ಕದ್ದಿದ್ದಾನೆ ಮಹಾನ್ ಕಳ್ಳ.
ರಾತ್ರಿ ವೇಳೆ ಆಗಮಿಸಿದ ಕಳ್ಳ 30 ಸೆಕುಂಡ್‌ಗಳಲ್ಲಿ ಹ್ಯಾಂಡ್ ಲಾಕ್ ಮುರಿದಿದ್ದಾನೆ. ಅದು ಕೂಡ ಯಾವುದೇ ಶಬ್ದವಾಗದ ರೀತಿಯಲ್ಲಿ. ಇನ್ನು 1.30 ನಿಮಿಷದಲ್ಲಿ ಇಗ್ನಿಷನ್ ಆನ್ ಮಾಡಿ ಬೈಕ್ ಸ್ಟಾರ್ಟ್ ಮಾಡಿ ಕಳುವು ಮಾಡಿದ್ದಾನೆ. ಇದು ಸಿಸಿ ಟಿವಿಯಲ್ಲಿ ದಾಖಲಾಗಿದೆ.