ಟೀಮ್​​ ಇಂಡಿಯಾಕ್ಕೆ ಸೂಪರ್​ ಕ್ಯಾಪ್ಟನ್ ಆಗಿದ್ದಾಳೆ ​ ಅನುಷ್ಕಾ ಶರ್ಮಾ..!

Date:

ಸದ್ಯ ಟೀಮ್​ ಇಂಡಿಯಾಕ್ಕೆ ವಿರಾಟ್​ ಕೊಹ್ಲಿಯವರೇ ನಾಯಕ. ಆದರೆ ಅವರನ್ನೂ ಮೀರಿದ ಸೂಪರ್​ ಕ್ಯಾಪ್ಟನ್​ ಒಬ್ಬರು ಟೀಮ್​ ಇಂಡಿಯಾದಲ್ಲಿದ್ದಾರೆ. ಅವರು ಬೇರಾರೂ ಅಲ್ಲ, ಕೊಹ್ಲಿಯವರ ಧರ್ಮಪತ್ನಿ ಅನುಷ್ಕಾ ಶರ್ಮಾ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಯಾವತ್ತೂ ಇಂಥಾದ್ದೊಂದು ಬೆಳವಣಿಗೆ ನಡೆದಿರಲಿಲ್ಲ. ಏಕೆಂದರೆ ಸದ್ಯ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಸೂಪರ್​ ಕ್ಯಾಪ್ಟನ್​ ಆಗಿ ತಂಡವನ್ನ ನಿಯಂತ್ರಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವಿಷಯ ಇಷ್ಟೆ, ಕಳೆದ ಏಷ್ಯಾ ಕಪ್​ ಸೀರಿಸ್​ನಲ್ಲಿ ಮ್ಯಾನ್​ ಆಫ್​ ದಿ ಸೀರಿಸ್​ ಆಗಿದ್ದ ಶಿಖರ್​ ಧವನ್ ಅದ್ಭುತ ಫಾರ್ಮ್​ನಲ್ಲಿದ್ದರು. ಇಂಗ್ಲೆಂಡ್​ ವಿರುದ್ಧ ನಡೆದ ಸೀರಿಸ್​ನಲ್ಲಿ ಶೀಖರ್​ ಧವನ್​ ಎರಡು ಶತಕ ಸೇರಿದಂತೆ 342 ರನ್ ಗಳಿಸಿದ್ದರು. ಹೀಗಿದ್ರೂ ಕಾರಣವೇ ಇಲ್ಲದೇ ವೆಸ್ಟ್​ ಇಂಡೀಸ್​ ಸೀರಿಸ್​ಗೆ ಅವರನ್ನ ಕೈಬಿಡಲಾಗಿದೆ. ಇದರ ಹಿಂದೆ ಸೂಪರ್​ ಕ್ಯಾಪ್ಟನ್​ ಅನುಷ್ಕಾ ಶರ್ಮಾ ಕೈವಾಡ ಇದೆ ಎನ್ನಲಾಗುತ್ತಿದೆ.
ಕೊಹ್ಲಿ ಪತ್ನಿ ಅನುಷ್ಕಾ ಹಾಗೂ ಧವನ್​ ಪತ್ನಿ ಆಯೇಷಾ ಇಬ್ಬರೂ ಗೆಳತಿಯರು. ಇಂಗ್ಲೆಂಡ್​ ವಿರುದ್ಧ ನಡೆದ ಲಂಡನ್​ನಲ್ಲಿ ನಡೆದ ಪಂದ್ಯವನ್ನ ಅಕ್ಕ ಪಕ್ಕ ಕುಳಿತುಕೊಂಡೇ ನೋಡಿದ್ದರು. ಆ ಪಂದ್ಯದ ವೇಳೆ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗುತ್ತಿದೆ. ಆ ಗಲಾಟೆಯ ಬಳಿಕ ತಂಡದಲ್ಲಿ ಶಿಖರ್ ಧವನ್​ ಅವರನ್ನ ನಿರ್ಲಕ್ಷ್ಯ ಮಾಡಲಾಗಿತ್ತು. ಅದಾದ ಬಳಿಕ ತಂಡದ ಆಯ್ಕೆ ವಿಚಾರದಲ್ಲಿ ಅನುಷ್ಕಾ ಶರ್ಮಾ ಮೂಗು ತೂರಿಸಿದ್ದರು ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಧವನ್ ಅವರನ್ನ ವೆಸ್ಟ್ ಇಂಡೀಸ್​ ಸೀರಿಸ್​ಗೆ ಆಯ್ಕೆ ಮಾಡಿಲ್ಲ ಎನ್ನುವ ಆರೋಪವೂ ಕೇಳಿ ಬಂದಿದೆ. ಅಷ್ಟೇ ಅಲ್ಲ, ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ಗಳ ಸಭೆಯಲ್ಲಿ ಕೊಹ್ಲಿ ಜೊತೆಯಲ್ಲಿ ಅನುಷ್ಕಾ ಶರ್ಮಾ ಕೂಡ ಭಾಗವಹಿಸುತ್ತಿದ್ದಾರೆ. ಈ ಬಗ್ಗೆ ಅನೇಕ ಆಟಗಾರರು ಬಿಸಿಸಿಐ ಮುಂದೆ ತಮ್ಮ ಅಸಮಾಧಾನವನ್ನ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ, ಭಾರತೀಯ ಕ್ರಿಕೆಟ್​ ತಂಡದಲ್ಲಿ ಅನುಷ್ಕಾ ಶರ್ಮಾ ಸೂಪರ್​ ಕ್ಯಾಪ್ಟನ್​ ರೀತಿಯಲ್ಲಿ ವರ್ತಿಸುತ್ತಿರುವುದು ಈಗ ಹಲವು ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...