ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಮೈಸೂರಿಂದ ಬರುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು ಗೊತ್ತೇ ಇದೆ.
ಅವರ ಕೈ ಮುರಿದಿದ್ದು ಇನ್ನು ಐದಾರು ತಿಂಗಳು ಶೂಟಿಂಗ್ ಗೆ ಹೋಗುವಂತಿಲ್ಲ.
ಡಿ.ಬಾಸ್ ಈಗ ರೆಸ್ಟ್ ನಲ್ಲಿದ್ದಾರೆ. ಗುಣಮುಖರಾದ ಮೇಲೆ ಶೂಟಿಂಗ್ ನಲ್ಲಿ ಬ್ಯುಸಿ ಆಗುತ್ತಾರೆ.
ಸರಿ, ದರ್ಶನ್ ಶೂಟಿಂಗ್ ಗೆ ಹೋಗ್ತಾ ಇಲ್ಲ. ಮತ್ತೇ ಮನೇಲಿ ಸುಮ್ಮನೇ ಕೂತಿದ್ದಾರ? ಇಲ್ಲ, ದರ್ಶನ್ ಈಗ ದೇಗುಲ ದರ್ಶನ ಮಾಡ್ತಿದ್ದಾರೆ.
ಹೌದು, ಅಪಘಾತದಿಂದ ಗಾಯಗೊಂಡಿರುವ ಚಾಲೆಂಜಿಂಗ್ ಸ್ಟಾರ್ ಈಗ ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡುವುದರಲ್ಲಿ ಬ್ಯುಸಿ ಇದ್ದಾರೆ. ಆದಷ್ಟು ಬೇಗ ಡಿ.ಬಾಸ್ ಕಂಪ್ಲೀಟ್ ಗುಣಮುಖರಾಗಿ ಶೂಟಿಂಗ್ ಗೆ ಹೋಗುವಂತಾಗ್ಲಿ ಅನ್ನೋದೇ ಅಭಿಮಾನಿಗಳ ಆಶಯ.