ಮನಸ್ಸಿದ್ದರೆ ಏನೆಲ್ಲಾ ಸಾಧಿಸಬಹುದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಮ್ಮ ಸುತ್ತ ಮುತ್ತ ಸಾವಿರಾರು ಜನರು ಕಷ್ಟದಿಂದಲೇ ಮೇಲೆದ್ದು ಬಂದಿದ್ದಾರೆ. ಇಲ್ಲೊಬ್ಬ ಯುವಕ ಮಾತ್ರ ಅವರೆಲ್ಲರಿಗಿಂತ ತುಸು ಭಿನ್ನ. ಏಕೆಂದರೆ ಆತ ಹೊಟ್ಟಪಾಡಿಗಾಗಿ ಚಹಾ ಮಾರುತ್ತಾ, ಇನ್ನುಳಿದ ಸಮಯದಲ್ಲಿ ಶ್ರದ್ಧೆಯಿಂದ ಓದುತ್ತಾ ಚಾರ್ಟರ್ಡ್ ಅಕೌಂಟಂಟ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾನೆ..!
ಸಿಎ ಅಂದರೆ ಕಬ್ಬಿಣದ ಕಡಲೆ ಎಂದು ಮೂಗು ಮುರಿಯುವವರೇ ಹೆಚ್ಚು. ಅಂತಹುದರಲ್ಲಿ ಪುಣೆಯ ಚಹಾ ಮಾರುವ ವಿದ್ಯಾರ್ಥಿಯೋರ್ವ ಸಲೀಸಾಗಿ ಸಿಎ ಪರೀಕ್ಷೆ ಪಾಸಾಗಿದ್ದಾನೆ. ಹೌದು.. ಪುಣೆಯ ಸೋಮನಾಥ್ ಬಲರಾಮ್ 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ. ಆದರೆ ಹಣದ ಕೊರತೆ ಹಾಗೂ ಮನೆಯಲ್ಲಿನ ತೀವ್ರ ಬಡತನದಿಂದಾಗಿ ಕಾರಣಕ್ಕೆ ಶಿಕ್ಷಣಕ್ಕೆ ಗುಡ್ಬೈ ಹೇಳಿ ಉದ್ಯೋಗದತ್ತ ಮುಖ ಮಾಡಿದ್ದ. ದುರಾದೃಷ್ಟಕ್ಕೆ ಆತನಿಗೆ ಯಾವುದೇ ನೌಕರಿ ದೊರೆಯಲಿಲ್ಲ. ಇದರಿಂದ ಬೇಸತ್ತ ಸೋಮನಾಥ ಚಹಾ ಅಂಗಡಿ ತೆರೆದ. ಅದೇ ಸಮಯದಲ್ಲೇ ಚಾರ್ಟರ್ಡ್ ಅಕೌಂಟಂಟ್ ಪರೀಕ್ಷೆ ಬರೆಯಬೇಕು, ಅದನ್ನು ಪಾಸ್ ಮಾಡಬೇಕು ಎಂಬ ಆಸೆಗೆ ನೀರುಣಿಸತೊಡಗಿದ.
ಚಹಾ ಮಾರುತ್ತಲೇ ಅಂಗಡಿಯಲ್ಲೇ ಚಾರ್ಟರ್ಡ್ ಅಕೌಂಟಂಟ್ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆ ಬರೆದ. ಹಗಲಿರುಳೆನ್ನದೇ ಓದಲಾರಂಭಿಸಿದ. ಅದರ ಫಲ ಎಂಬಂತೆ ಮೊದಲ ಪ್ರಯತ್ನದಲ್ಲೇ ಸೋಮನಾಥ ಶೇ 55ರಷ್ಟು ಅಂಕಗಳಿಸಿ ಪಾಸಾಗಿದ್ದಾನೆ.
ಸೋಮನಾಥ ತಾನು ಸಿಎ ಪರೀಕ್ಷೆ ಪಾಸ್ ಮಾಡಿರುವುದಕ್ಕೆ ಸಂತಸಗೊಂಡಿದ್ದಾನೆ. ತನ್ನ ಗೆಳೆಯರು ಹಾಗೂ ಚಹಾ ಅಂಗಡಿಗೆ ಬರುತ್ತಿದ್ದ ಹಲವಾರು ಜನರ ಸಹಾಯದಿಂದ ಸಿಎ ಪಾಸ್ ಆಗಲು ಸಾಧ್ಯವಾಯ್ತು ಅಂತಾ ಸೋಮನಾಥ ಔದಾರ್ಯತೆ ಮೆರೆಯುತ್ತಿದ್ದಾನೆ. ಇತರರಿಗೆ ಮಾದರಿಯಾಗಿದ್ದಾನೆ
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!