ಸರ್ಕಾರಿ ಕೆಲಸವೇ ಹಾಗೆ.. ಒಮ್ಮೆ ಸಿಕ್ಕಿತೆಂದರೆ ಮತ್ತೇ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಉತ್ತಮ ಸೌಲಭ್ಯ, ಸರಿಯಾದ ಸಮಯಕ್ಕೆ ಸಂಬಳ, ಕಡಿಮೆ ಕೆಲಸ ಸಿಗುವುದು ಸರ್ಕಾರಿ ಕೆಲಸದಲ್ಲಿ ಮಾತ್ರ. ಆದರೆ ಹೆಚ್ಚು ಓದಿದವರು ಕೆಲವೊಂದು ಕೆಲಸಗಳತ್ತ ಗಮನಹರಿಸುವುದೇ ಇಲ್ಲ. ಏಕೆಂದರೆ ಅವರು ತಮ್ಮ ಪದವಿಗೆ ತಕ್ಕ ಕೆಲಸ ಹುಡುಕುತ್ತಿರುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ದೊಡ್ಡ ದೊಡ್ಡ ಪದವಿ ಪಡೆದವರೂ ಕೂಡಾ ಚಿಕ್ಕ ಕೆಲಸದತ್ತ ಮುಖ ಮಾಡಿದ್ದಾರೆ..!
ಉತ್ತರ ಪ್ರದೇಶದಲ್ಲಿ 114 ಜಾಡಮಾಲಿ (ಸ್ವೀಪರ್) ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಅರ್ಜಿಗಳು ಬಂದಿವೆ..! ಕೇವಲ 114 ಹುದ್ದೆಗಳಿಗೆ ಸುಮಾರು 19,000ಕ್ಕೂ ಹೆಚ್ಚು ಜನರು ಅಪ್ಲಿಕೇಶನ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅದಕ್ಕಿಂತಲೂ ದೊಡ್ಡ ಅಚ್ಚರಿ ಏನೆಂದರೆ 17,000 ರೂಪಾಯಿ ಸಂಬಳ ದೊರೆಯುವ ಜಾಡಮಾಲಿ ಕೆಲಸಕ್ಕೆ ಎಂಬಿಎ, ಬಿ.ಟೆಕ್ ಸೇರಿದಂತೆ ದೊಡ್ಡ ದೊಡ್ಡ ಪದವಿಗಳನ್ನು ಪಡೆದವರೂ ಕೂಡಾ ಅರ್ಜಿ ಸಲ್ಲಿಸಿದ್ದಾರೆ..!
ದೇಶದಲ್ಲಿ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ವಿದ್ಯಾವಂತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ವಿದ್ಯಾವಂತರಿಗೆ ಅಗತ್ಯವಾಗಿ ಬೇಕಿರುವ ಉದ್ಯೋಗ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಸರ್ಕಾರಗಳು ಎಡವುತ್ತಿವೆ. ದೇಶದಲ್ಲಿ 3,364 ಎಂಬಿಎ ಕಾಲೇಜುಗಳಿದ್ದು, ಅವುಗಳಲ್ಲಿ 3.5 ಲಕ್ಷ ಓದುತ್ತಿದ್ದಾರೆ. ಒಂದು ಸರ್ವೇ ಪ್ರಕಾರ ಶೇಕಡಾ 10 ಪ್ರತಿಶತ ವಿದ್ಯಾರ್ಥಿಗಳಿಗೆ ಮಾತ್ರ ಉತ್ತಮ ಕೆಲಸ ದೊರೆಯುತ್ತಿವೆಯಂತೆ. ಆದ್ದರಿಂದ ಇನ್ನುಳಿದವರು ಬೇರೆಯ ಕೆಲಸವನ್ನು ಹುಡುಕುತ್ತಾರೆ. ಈಗ ಉತ್ತರ ಪ್ರದೇಶದಲ್ಲೂ ಕೂಡಾ ಅದೇ ಆಗಿರುವುದು.
ನಮ್ಮ ದೇಶದಲ್ಲಿ ಅತ್ಯದ್ಭುತ ಟ್ಯಾಲೆಂಟ್ ಗಳಿವೆ. ಆದರೆ ಅವರು ಹಣದಾಸಗೆ ಮತ್ತಿನ್ನೇನೋ ಕಾರಣಗಳಿಂದಾಗಿ ದೇಶ ತೊರೆದು ದೊಡ್ಡ ದೊಡ್ಡ ದೇಶದಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ನಮ್ಮ ದೇಶದಲ್ಲಿ ಉತ್ತಮ ಉದ್ಯೋಗ ಇಲ್ಲದಿರುವುದು. ಉತ್ತಮ ಹುದ್ದೆ ಇದ್ದರೂ ಕೂಡಾ ಅದಕ್ಕೆ ತಕ್ಕನಾದ ಸಂಬಳ ಇರುವುದಿಲ್ಲ. ಆದ್ದರಿಂದ ದೇಶದ ಯುವಕರು ವಿದೇಶಗಳತ್ತ ಮುಖ ಮಾಡುತ್ತಿದ್ದಾರೆ.
ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟಕ್ಕೆ ಬೆಳೆದರೂ ಅಚ್ಚರಿ ಇಲ್ಲ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!