ಕುಡಿದು ಕಾರು ನಡೆಸುತ್ತಿದ್ದವನು ನಾನೇ: ಸಾಂಬಿಯಾ
ಗಣರಾಜ್ಯೋತ್ಸವ ಪೆರೇಡ್ ರಿಹರ್ಸಲ್ ನಡೆಸುತ್ತಿದ್ದ ವೇಳೆ ಕಾರು ಹರಿದು ಐಎಎಫ್ ಅಧಿಕಾರಿಯ ಸಾವು ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಮೊಹಮ್ಮದ್ ಸೊಹ್ರಬ್ ಪುತ್ರ ಸಾಂಬಿಯಾ ಸೊಹರಬ್, “ಅವಘಡಕ್ಕೆ ಕಾರಣವಾದ ಕಾರನ್ನು ನಾನೇ ಕುಡಿದು ಚಲಾಯಿಸುತ್ತಿದ್ದೆ’ ಎಂದು ಒಪ್ಪಿಕೊಂಡಿದ್ದಾನೆ. ರೆಡ್ ರೋಡ್ ಹಿಟ್ ಆ್ಯಂಡ್ ರನ್ ಕೇಸ್ ಎಂದೇ ತಿಳಿಯಲ್ಪಟ್ಟಿರುವ ಈ ಪ್ರಕರಣದ ಮುಖ್ಯ ಆರೋಪಿಯಾಗಿರುವ ಸಾಂಬಿಯಾ, ತನಿಖಾಧಿಕಾರಿಗಳಿಂದ ಶುಕ್ರವಾರ ಬೆಳಗ್ಗಿನಿಂದ ತೊಡಗಿ ಸುದೀರ್ಘ ಅವಧಿಗೆ ಪ್ರಶ್ನಿಸಲ್ಪಡುತ್ತಿದ್ದಾಗ ಕುಸಿದು ಬಿದ್ದ. ಜನವರಿ 13ರಂದು ಬೆಳಗ್ಗೆ ಐಎಎಫ್ ಅಧಿಕಾರಿ ಅಭಿಮನ್ಯು ಗಾವುದ್ ರ ಸಾವಿಗೆ ಕಾರಣವಾಗುವಂತೆ ಬಿಳಿ ಬಣ್ಣದ ಹೊಸ ಆಡಿ ಕಾರನ್ನು ಚಲಾಯಿಸುತ್ತಿದ್ದವನು ನಾನೇ ಎಂದಾತ ಒಪ್ಪಿಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ.
ನೇತಾಜಿ ಕುರಿತ 100 ಕಡತ ರಿಲೀಸ್
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 119ನೇ ಜನ್ಮ ದಿನದಂದು ಸುಮಾರು 70 ವರ್ಷಗಳ ಬಳಿಕ ಎನ್ ಡಿಎ ನೇತೃತ್ವದ ಕೇಂದ್ರ ಸರಕಾರ ಮೊದಲ ಬಾರಿಗೆ ನೇತಾಜಿಗೆ ಸಂಬಂಧಿಸಿದ 100 ರಹಸ್ಯ ಕಡತಗಳನ್ನು ಶನಿವಾರ ಬಿಡುಗಡೆಗೊಳಿಸಿದೆ. 100 ಕಡತಗಳ ಡಿಜಿಟಲ್ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದರು. ದಾಖಲೆಯಲ್ಲಿ ಸುಭಾಶ್ಚಂದ್ರ ಬೋಸ್ ರನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರವರು ವಾರ್ ಕ್ರಿಮಿನಲ್ ಎಂದು ಕರೆದಿರುವ ಅಂಶ ಉಲ್ಲೇಖವಾಗಿದೆ. 1945ರಲಲಿ ಅಂದಿನ ಬ್ರಿಟಿಶ್ ಪ್ರಧಾನಿಗೆ ಬರೆದ ಪತ್ರದಲ್ಲಿ ರಷ್ಯಾ ಪ್ರವೇಶಿಸಲು `ವಾರ್ ಕ್ರಿಮಿನಲ್’ ಸುಭಾಶ್ಚಂದ್ರ ಬೋಸ್ ಗೆ ಅನುಮತಿ ನೀಡುವ ಮೂಲಕ ಸ್ಟ್ಯಾಲಿನ್ ದ್ರೋಹವೆಸಗಿದ್ದಾರೆ ಎಂದು ನೆಹರುರವರು ಆಕ್ರೋಶ ವ್ಯಕ್ತಪಡಿಸಿದ್ದರು.
ಉಸಿರಾಟ ತೊಂದರೆ, ಪಂಜಾಬ್ ಸಿಎಂ ಆಸ್ಪತ್ರೆಗೆ ದಾಖಲು
ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ. ಶುಕ್ರವಾರ ರಾತ್ರಿ 10.30ರ ಸಮಯದಲ್ಲಿ ಉಸಿರಾಟ ತೊಂದರೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವೈದ್ಯಕೀಯ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 88 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ದೇಶದಲ್ಲಿಯೇ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನುನ ಹೊಂದಿದ್ದಾರೆ.
ಪಹರಿ ಮಂದಿರ್ನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜಾರೋಹಣ
ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ 118ನೇ ಜನ್ಮದಿನಾಚರಣೆಯನ್ನು ಶನಿವಾರ ಆಚರಿಸುತ್ತಿದ್ದು, ಜಾರ್ಖಂಡ್ನ ಪಹರಿ ಮಂದಿರ್ನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಹಾರಿಸುವ ಮೂಲಕ ನೇತಾಜಿಯವರನ್ನು ಸ್ಮರಿಸಲಾಗುತ್ತಿದೆ. 98 ಅಡಿ ಉದ್ದ 66 ಅಡಿ ಅಗಲವಿರುವ ಈ ಬೃಹತ್ ರಾಷ್ಟ್ರಧ್ವಜವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಹಣ ಮಾಡಲಿದ್ದಾರೆ.
ಭಾಳಾಠಾಕ್ರೆ ಜನ್ಮದಿನ ಸ್ಮರಿಸಿದ ಪ್ರಧಾನಿ ಮೋದಿ
ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆಯವರ 90ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. “ಭಾಳಾಸಾಹೇಬ್ ಠಾಕ್ರೆ… ನನ್ನ ಮನಸ್ಸಿನಲ್ಲಿ ಹಲವು ನೆನಪುಗಳು ತುಂಬಿಕೊಂಡಿವೆ. ಅತಿ ಹೆಚ್ಚು ಗೌರವ ಹೊಂದಿರುವ ಅವರ ಜನ್ಮ ದಿನದ ಅಂಗವಾಗಿ ನನ್ನ ನಮನಗಳು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಸಮಾಧಾನ ತಂದ ಸೂಚ್ಯಂಕ ಚೇತರಿಕೆ
ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಅಚ್ಚರಿಯಂತೆ ಏರಿಕೆ ಕಂಡಿದೆ. ಯೂರೋಪಿಯನ್ ಒಕ್ಕೂಟ ಹೊಸ ಆಥರ್ಿಕ ಉತ್ತೇಜನ ಪ್ಯಾಕೇಜ್ ನೀಡಲಿದೆ ಎಂಬ ವರದಿಗಳು ಮತ್ತು ಕಚ್ಚಾ ತೈಲ ದರಗಳು ತುಸು ಏರಿಕೆಯಾಗಿರುವುದರಿಂದ ಹೂಡಿಕೆದಾರರು ವಹಿವಾಟಿನಲ್ಲಿ ತೊಡಗಿದ್ದರು. ಇದರಿಂದ ಸೆನ್ಸೆಕ್ಸ್ 473.45 ಅಂಕಗಳಷ್ಟು ಏರಿಕೆ ಕಂಡು 24, 435.66 ಅಂಶಗಳಿಗೆ ಏರಿಕೆಯಾಯಿತು. ಕಳೆದ ಅಕ್ಬೋಬರ್ 5ರ ನಂತರ ಇದು ಗರಿಷ್ಠ ಏಕದಿನ ಗಳಿಕೆಯಾಗಿದೆ. 24,122.06 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ ಸೂಚ್ಯಂಕ ದಿನಪೂರ್ತಿ ಏರುಮುಖದಲ್ಲಿತ್ತು. ಒಂದು ಹಂತದಲ್ಲಿ ದಿನದ ಗರಿಷ್ಠ 24,472.88ವರೆಗೂ ತಲುಪಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 145.65 ಅಂಕಗಳ ಏರಿಕೆಯೊಂದಿಗೆ 7, 422.45ಕ್ಕೆ ವಹಿವಾಟು ಮುಗಿಸಿತು.
ಸಿಎಂ ಭಾಷಣ ಅರ್ಧಕ್ಕೆ ಮೊಟಕು; ಎತ್ತಿನಹೊಳೆ ಯೋಜನೆ ಬಗ್ಗೆ ಸಂಶಯಬೇಡ
ಎತ್ತಿನಹೊಳೆ ನೀರಾವರಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟಗಾರರ ಮಾತಿನ ಚಕಮಕಿಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚದಲಪುರದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಪ್ರತಿಭಟನೆಯ ಬಿಸಿ ಮುಟ್ಟಿಸಿಕೊಂಡಿದ್ದ ಮುಖ್ಯಮಂತ್ರಿಗಳು ಭಾಷಣ ಅರ್ಧಕ್ಕೆ ಮೊಟಕುಗೊಳಿಸಿ ಸಮಜಾಯಿಷಿ ನೀಡಿದ್ದರು. ಎತ್ತಿನಹೊಳೆ ಯೋಜನೆ ಬದಲು ಪರಮಶಿವಯ್ಯ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಕಳೆದ 125 ದಿನಗಳಿಂದ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ಸಿಎಂ ಕಾರ್ಯಕ್ರಮದಲ್ಲೂ ತಮ್ಮ ಅಸಮಾಧಾನ ಹೊರಹಾಕಿದ್ದರು. ಆಗ ಹೋರಾಟಗಾರರ ಜೊತೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಜಾರಿ ಬಗ್ಗೆ ಯಾವುದೇ ಸಂಶಯ ಬೇಡ. ನೀವು ನೀರು ಬೇಡವೆಂದರೂ ನಾವು ನೀರು ಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆರು ಶಂಕಿತ ಉಗ್ರರು ದೆಹಲಿ ಎನ್ ಐಎ ಕಸ್ಟಡಿಗೆ; ಕೋರ್ಟ್
ಬೆಂಗಳೂರು ಹಾಗೂ ತುಮಕೂರು, ಮಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದ ಆರು ಮಂದಿ ಶಂಕಿತ ಉಗ್ರರನ್ನು ಬೆಂಗಳೂರಿನ ಕೋರ್ಟ್ ದೆಹಲಿ ಎನ್ ಐಎಗೆ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. ಬೆಳಗ್ಗೆ ಆರು ಮಂದಿ ಶಂಕಿತ ಉಗ್ರರ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಎನ್ ಐಎ ಅಧಿಕಾರಿಗಳು ನಗರದ ನೃಪತುಂಗ ರಸ್ತೆಯಲ್ಲಿರುವ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ಎನ್ ಐಎ ಕೋರ್ಟ್ ಗೆ ಹಾಜರುಪಡಿಸಿತ್ತು. ಶಂಕಿತ ಉಗ್ರರ ಪ್ರಕರಣದಲ್ಲಿ, ಬಂಧಿತರನ್ನು ಹೆಚ್ಚಿನ ತನಿಖೆಗೆ ಗುರಿಪಡಿಸುವುದರಿಂದ ತಮ್ಮ ವಶಕ್ಕೆ ನೀಡಬೇಕೆಂದು ಎನ್.ಐ.ಎ ಪರ ವಕೀಲರು ವಾದ ಮಂಡಿಸಿದ್ದರು. ಬಳಿಕ ಆರು ಮಂದಿ ಶಂಕಿತ ಉಗ್ರರನ್ನು ದೆಹಲಿ ಎನ್.ಐ.ಎ ವಶಕ್ಕೆ ಒಪ್ಪಿಸಿತು.
ಕೆನಡಾದಲ್ಲಿ ಶೂಟಿಂಗ್: 5 ಸಾವು, ಇಬ್ಬರು ಗಂಭೀರ
ಕಳೆದ 26 ವರ್ಷಗಳಲ್ಲೇ ಅತ್ಯಂತ ಭೀಕರ ಎನಿಸಿರುವ, ಕೆನಡಾದ ಸ್ಯಾಸ್ಕಚೆವಾನ್ ಪ್ರಾಂತ್ಯದ ಹೈಸ್ಕೂಲ್ ಒಂದರಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಐದು ಮಂದಿ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಶಂಕಿತ ಶೂಟರ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದಾತನು ಶಾಲೆಯ ಹಳೆ ವಿದ್ಯಾರ್ಥಿ ಇರಬಹುದೆಂದು ಶಂಕಿಸಲಾಗಿದೆ.
ಅಸಹಿಷ್ಣುತೆ ಅಲ್ಲ, ಅತಿ ಸೂಕ್ಷ್ಮತೆ ಇದೆ: ನಟಿ ಕಾಜೋಲ್
ಭಾರತದಲ್ಲಿ ಅಸಹಿಷ್ಣುತೆ ಅಲ್ಲ, ಅತಿ ಸೂಕ್ಷ್ಮತೆ ಇದ್ದು, ಜನರು ಕೆಲವು ವಿಷಯಗಳ ಬಗ್ಗೆ ಅತಿ ಸೂಕ್ಷ್ಮತೆಯಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬುದ್ಧಿವಂತಿಕೆಯಿಂದ ಮಾತನಾಡುವುದು ಸಾರ್ವಜನಿಕ ಜೀವನದಲ್ಲಿರುವವರ ಕರ್ತವ್ಯವಾಗಿರುತ್ತದೆ ಎಂದು ಕಾಜೋಲ್ ಹೇಳಿದ್ದಾರೆ. ಅಮೀರ್ ಖಾನ್, ಶಾರೂಖ್ ಖಾನ್ ನೇರವಾಗಿ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!
ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!