ಸ್ಯಾಂಡಲ್ ವುಡ್ ನಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಿರುವ ಕೊಡಗಿನ ಬೆಡಗಿ ದಿಶಾ ಪೂವಯ್ಯ .
ಪಾತ್ರ ಯಾವುದೇ ಇರಲಿ, ಅದಕ್ಕೆ ನ್ಯಾಯ ಒದಗಿಸೋ ಚೆಲುವೆ. ಇವರು ಈಗಾಗಲೇ ಅನೇಕ ವಿಭಿನ್ನ ಮಾತ್ರಗಳಲ್ಲಿ ನಟಿಸಿದ್ದಾರೆ. ಈಗ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಇವರಿಗೆ ಮೊತ್ತೊಂದು ಚಾಲೆಂಜಿಂಗ್ ಪಾತ್ರ. ಆದ್ರೆ, ಇದಕ್ಕೆ ಜೀವ ತುಂಬುತ್ತಾರೆ ಅನ್ನೋದ್ರಲಿ ನೋ ಡೌಟ್.
ಹರ್ಷ ನಾರಾಯಣ ಸ್ವಾಮಿ ನಿರ್ದೇಶನದ ‘ಸಾಲಿಗ್ರಾಮ’ ಸಿನಿಮಾದಲ್ಲಿ ದಿಶಾ ನಾಯಕಿ. ಇಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದ ಹೆಸರು ‘ಸಾಲಿಗ್ರಾಮ’ ಅಂತ ಕೇಳಿದ್ರೆ ಇದು ಭಕ್ತಿಪ್ರಧಾನ ಚಿತ್ರ ಎಂದುಕೊಂಡ್ರೆ ನಮ್ಮ ಯೋಚನೆ ತಪ್ಪು. ಇದೊಂದು ಪಕ್ಕಾ ಕಮರ್ಷಿಯಲ್ ಹಾರರ್ ಮೂವಿ ಎಂದು ಹೇಳುತ್ತೆ ಚಿತ್ರತಂಡ. ಸಿದ್ಧಾರ್ಥ್ ಮಾಧ್ಯಮಿಕ್, ರಂಜಿತ್, ಪಲ್ಲವಿ ರಾಜ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ಚಿತ್ರದ ಆಡಿಯೋ ಲಾಂಚ್ ಮಾಡಿ , ಚಿತ್ರತಂಡಕ್ಕೆ ಶುಭಕೋರಿದ್ದಾರೆ.