ಮಹಿಳೆ ಸೆಕ್ಸ್ ಗಾಗಿ ನಿರಂತ ಪೀಡಿಸುತ್ತಿದ್ದಿದ್ದರಿಂದ ವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ!
ಮಹಾರಾಷ್ಟ್ರದ ಪರ್ಭಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಚಿನ್ ಎಂಬ 38 ವರ್ಷದ ವಿವಾಹಿತ ಮೃತ.
ಸಹೋದ್ಯೋಗಿ ಮಹಿಳೆ ಆರೋಪಿ. ಸಚಿನ್ ಗೆ ಮದುವೆ ಆಗಿದೆ ಅಂತ ಗೊತ್ತಿದ್ದರೂ ಈಕೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಪೀಡಿಸುತ್ತಿದ್ದಳು ಎಂಬ ಆರೋಪವಿದೆ. ಲೈಂಗಿಕ ಸಂಪರ್ಕ ಮಾಡ್ದೇ ಇದ್ರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಹೆದರಿಸಿದ್ದಳು ಎನ್ನಲಾಗಿದೆ.
ಸಚಿನ್ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ ವರದಿಯಾಗಿದೆ.