ಕೊಲೆಯನ್ನು ಯಾವ ಕಾರಣಕ್ಕೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಬಹುತೇಕರು ನೀಡುವ ಉತ್ತರವೇನೆಂದರೆ ದ್ವೇಷವೋ, ಆ ಕ್ಷಣದಲ್ಲಿ ನಡೆಯುವ ಘಟನೆಯೋ ಇಲ್ಲಾ ಹಣಕ್ಕಾಗಿಯೋ ಎಂದು ಹೇಳಬಹುದು. ಆದರೆ ಇಲ್ಲೋರ್ವ ವ್ಯಕ್ತಿಗೆ ನೀನು ಯಾಕೆ ಕೊಲೆ ಮಾಡಿದೆ ಎಂದು ಕೇಳಿದರೆ `ಟೈಮ್ಪಾಸ್’ ಗೆ..! ಕೊಲೆ ಅಂದರೆ ಅದು ಮೋಜು ಎನ್ನುತ್ತಾನೆ..! ಪ್ರತಿಯೊಬ್ಬರ ಪ್ರಾಣದೊಂದಿಗೆ ಆಡುವುದು ಖುಷಿ ಕೊಡುವ ಆಟ ಎಂಬ ಉತ್ತರ ನೀಡುತ್ತಾನೆ..! ಇಷ್ಟಕ್ಕೂ ಆ ಮನುಷ್ಯ ಮೋಜಿನ ಖುಷಿಯಲ್ಲಿ ಈತ ಕೊಂದ ಜನರ ಸಂಖ್ಯೆ ಬರೋಬ್ಬರಿ 41!
ಆತನ ಹೆಸರು ಸೈಲ್ಸನ್ ಜೋಸೇಡಾಸ್ ಗ್ರಕಾಸ್. ಈತ ಸೈಕೋ ಕಿಲ್ಲರ್..! ಮಹಿಳೆಯೊಬ್ಬರನ್ನು ಚಿತ್ರಹಿಂಸೆ ನೀಡಿ ಕೊಂದ ಆರೋಪದಲ್ಲಿ ಬಂಧಿತನಾದ ಈ ವ್ಯಕ್ತಿ ತನ್ನ ಈ ಹಿಂದಿನ ಕೊಲೆಯ ರಹಸ್ಯವನ್ನೆಲ್ಲಾ ಒಪ್ಪಿಕೊಂಡಿದ್ದಾನೆ. ಅದೂ ಅಲ್ಲದೆ, ಈತ ಬಿಳಿಯ ಮಹಿಳೆಯನ್ನು ಕೊಂದಿದ್ದಾನೆ. ಕೊಲ್ಲುವುದಕ್ಕೂ ಮುನ್ನ ಆಕೆಯನ್ನು ಹಲವು ದಿನಗಳ ಹಿಂಬಾಲಿಸಿ, ಆಕೆಯ ಬಗ್ಗೆ ತಿಳಿದು ಬಳಿಕ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ. 26 ವರ್ಷದ ಈ ಯುವಕನನ್ನು ಪೊಲೀಸರು ಸೈಕೋಪಾತ್ ಎಂದು ಹೇಳಿದ್ದಾರೆ.
ಈ ಕೊಲೆಗಾರ ಯುವಕ ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಈ ಹಿಂದಿನ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದಾರೆ. ಈ ಕೊಲೆಗಾರ ಒಪ್ಪಿಕೊಂಡಿರುವಂತೆ ಇದುವರೆಗೆ 37 ಮಹಿಳೆಯರು, ಮೂವರು ಗಂಡಸರು ಹಾಗೂ ಎರಡು ವರ್ಷದ ಮಗುವನ್ನು ಕೊಂದಿದ್ದಾನೆ. ಈತ ಮೊದಲು ಕೊಲೆ ಮಾಡಿದ್ದು ತನ್ನ 17ನೇ ವಯಸ್ಸಿನಲ್ಲಿ.
`17ನೇ ವಯಸ್ಸಿನಲ್ಲಿ ಮಹಿಳೆಯೊಬ್ಬಳನ್ನು ಕೊಂದೆ. ಅದು ನನಗೆ ಧೈರ್ಯ ತಂದಿತ್ತು. ಇದನ್ನೇ ಮುಂದುವರಿಸಿಕೊಂಡು ಹೋದೆ. ಇದರಲ್ಲಿ ನನಗೆ ಖುಷಿ ಸಿಕ್ಕಿದೆ.’ ಈತನ ಮೊದಲ ಆದ್ಯತೆ ಮೋಜಾದರೂ, ಯಾರಾದರೂ ಸುಪಾರಿ ಕೊಟ್ಟರೂ ಕೊಲ್ಲುತ್ತಿದ್ದ. ದಂಪತಿಯೊಂದು ಈತನಿಗೆ ಸುಪಾರಿ ಕೊಟ್ಟಿತ್ತು. ಈ ಪ್ರಕರಣದಲ್ಲಿ ಸುಪಾರಿ ಕೊಟ್ಟ ದಂಪತಿಯನ್ನು ಪೊಲೀಸರು ಬಂಧಿಸಿದ್ದರು.
ತನ್ನ ಈ ವೃತ್ತಾಂತವನ್ನೆಲ್ಲಾ ಹೇಳುವ ಈ ಸೈಕೋ ಜೈಲಿಗೆ ಹೋದರೂ ಚಿಂತೆಯಿಲ್ಲ. ಜೈಲಿನಿಂದ ಹೊರಬಂದ ನಂತರ ಮತ್ತೆ ಇದೇ ಕೃತ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದೂ ಹೇಳುತ್ತಿದ್ದಾನೆ..! ಆದರೆ ಅದಕ್ಕೂ ಮೊದಲು ಜೈಲಿನಲ್ಲಿ ಯಾರನ್ನೂ ಕೊಲೆ ಮಾಡದಿರಲಿ ಎಂಬುದೇ ನಮ್ಮ ಆಶಯ..!
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!