ಬೇರೆ ಬೇರೆಕಡೆ ಊಟ ಮಾಡ್ಬೇಕು. ಮಾಮೂಲಿ ಒಂದೇ ಕಡೆ ಊಟ ಬೋರು ಅನ್ನೋರು ಫ್ಲೈ ಡೈನಿಂಗ್ ಯಾಕೆ ಟ್ರೈ ಮಾಡ್ಬಾರ್ದು? ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ನಾಗವರಕ್ಕೆ ಹೋದ್ರೆ ಅಲ್ಲಿ ತೇಲುವ ರೆಸ್ಟೋರೆಂಟ್ ನಲ್ಲಿ ಊಟ ಮಾಡ್ಬಹುದು.
ನೆಲದಿಂದ 50 ಅಡಿ ಎತ್ತರದಲ್ಲಿದ್ದು ಒಂದು ಸಲಕ್ಕೆ 22 ಮಂದಿ ಕೂರಬಹುದು. ಇದು 360 ಡಿಗ್ರಿಯಲ್ಲಿ ತಿರುಗುತ್ತಿದ್ದು ಭದ್ರತೆಯ ದೃಷ್ಟಿಯಿಂದ 16 ಮೆಟಲ್ ಹಗ್ಗಗಳಿಂದ ಬಿಗಿಗೊಳಿಸಲಾಗಿದೆ. 4 ಸಿಬ್ಬಂದಿ ಎಲ್ಲಾ ಮೂಲೆಯಲ್ಲೂ ನಿಂತಿರುತ್ತಾರೆ.
ಇದರಲ್ಲಿ ಗರ್ಭಿಣಿಯರು ಮತ್ತು 13 ವರ್ಷಕ್ಕಿಂತಲೂ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಒಬ್ಬ ವ್ಯಕ್ತಿಯ ತೂಕ 150 ಕೆ.ಜಿ ಒಳಗಿರಬೇಕು. ಫೋನ್ ಹೊರತುಪಡಿಸಿ ಯಾವುದೆ ರೀತಿಯ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
ಇದರ ಬೆಲೆ :
ಸಂಜೆ 5 ಗಂಟೆಗೆ ಮೊನ್ ಟೈಲ್ ಸೆಷನ್ ಗೆ ರೂ.3999 (ಒಬ್ಬರಿಗೆ)
ರಾತ್ರಿ ಡೈನಿಂಗ್ 7 ಗಂಟೆ ನಂತರದ ಸೆಷನ್ ರೂ. 6999 (ಒಬ್ಬರಿಗೆ)