ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಆದಿತ್ಯ ಚೋಪ್ರ ನಿರ್ದೇಶನದ ದಿಲ್ ವಾಲೆ ದುನಿಯಾ ಲೇ ಜಾಯೆಂಗೆ (ಡಿಡಿಎಲ್ ಜೆ) 1200 ವಾರ ಪೂರೈಸಿದೆ.
ಈ ಚಿತ್ರ ತೆರೆಕಂಡಿದ್ದು 1995ರಲ್ಲಿ. ಮುಂಬೈನ ಮರಾಠ ಚಿತ್ರಮಂದಿರದಲ್ಲಿ ಅಂದು ಬಿಡುಗಡೆಯಾದ ಈ ಸಿನಿಮಾ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ. ಕೆಲವೊಮ್ಮೆ ಬೆಳಿಗ್ಗೆ 11.30ರ ಪ್ರದರ್ಶನ ಹೌಸ್ ಫುಲ್ ಆಗುತ್ತದೆ. ಇದು ರೆಕಾರ್ಡ್.