ದೆಹಲಿ ಮಾಜಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಶನಿವಾರ ರಾತ್ರಿ ವಿಧಿವಶರಾಗಿದ್ದಾರೆ. ಇವರಿಗೆ 82 ವರ್ಷ ವಯಸ್ಸಾಗಿತ್ತು.
1993ರಿಂದ 1996ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದರು. ಇವರು ರಾಷ್ಟ್ರರಾಜಧಾನಿಯ 3ನೇ ಮುಖ್ಯಮಂತ್ರಿ ಆಗಿದ್ದರು.
ಖುರಾನಾ ಜನಸಂಘ ಮತ್ತು ಬಿಜೆಪಿಯ ಪ್ರಮುಖ ನಾಯಕರಾಗಿದ್ದರು. 2004ರಲ್ಲಿ ರಾಜಸ್ಥಾನ ರಾಜ್ಯಪಾಲರಾಗಿದ್ದರು. ಅಡ್ವಾಣಿ ಟೀಕಿಸಿದ್ದಕ್ಕೆ 2005ರಲ್ಲಿ ಬಿಜೆಪಿಯಿಂದ ಹೊರ ಹಾಕಿದ ಬಳಿಕ ಅವರು ರಾಜಕೀಯ ನೇಪಥ್ಯಕ್ಕೆ ಸರಿದಿದ್ದರು.