ಮದ್ಯಪಾನದಿಂದ ಭಾರತದಲ್ಲಿ ಪ್ರತಿ ವರ್ಷ 2.6 ಲಕ್ಷ ಮಂದಿ ಸಾಯುತ್ತಿದ್ದಾರಂತೆ.
ಕ್ಯಾನ್ಸರ್, ಲಿವರ್ ಸಮಸ್ಯೆಯಿಂದ ಹಲವರು ಬಳಲಿ ಸಾವನ್ನಪ್ಪಿದರೆ, ಮತ್ತೆ ಕೆಲವರು ಕುಡಿದು ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಅಪಘಾತಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದೆ.
ಪ್ರಪಂಚದಾದ್ಯಂತ ಪ್ರತಿನಿತ್ಯ 6 ಸಾವಿರ ಜನರು ಸಾವನ್ನಪ್ಪುತ್ತಿದ್ದರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇನ್ನು ಇದರಲ್ಲಿ ಕುಡಿತದಿಂದಾಗಿ ರಸ್ತೆ ಅಪಘಾತಕ್ಕೆ ಶೇ 28ರಷ್ಟು ಜನ ತುತ್ತಾದರೆ, ಶೇ 21ರಷ್ಟು ಜನ ಜೀರ್ಣಾಂಗ ಸಮಸ್ಯೆಯಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ.
ಭಾರತದಲ್ಲಿ ಪ್ರತಿ ವರ್ಷ ಭಾರತೀಯ ರಸ್ತೆಗಳಲ್ಲಿ ವರದಿಯಾಗಿರುವ 1 ಲಕ್ಷ ಸಾವುಗಳು ಕೂಡ ಮದ್ಯಪಾನದಿಂದ ಸಂಭವಿಸುತ್ತದೆ . ಇದು ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿರೋ ವರದಿ.