ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಟಾರ್ಗೆಟ್ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಟೂರ್ನಿಯಲ್ಲಿ ಸತತ 3 ಶತಕಗಳಿಸಿರುವ ಕೊಹ್ಲಿಗೆ ಅಕ್ತರ್ ಚಾಲೆಂಜ್ ನೀಡಿದ್ದಾರೆ.
ಕೊಹ್ಲಿ ಸಾಧನೆ ಪ್ರಶಂಸಿಸಿರುವ ಅಕ್ತರ್ ಕೊಹ್ಲಿ 120 ಶತಕ ಮಾಡಬೇಕೆಂದಿದ್ದಾರೆ. ಸದ್ಯ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 62 ಶತಕ ಸಿಡಿಸಿದ್ದಾರೆ.