ಬುದ್ಧಿವಂತರಿಗೆ ಹುಡ್ಗಿ ಸಿಗಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.
ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಲವ್ ಡೇಟಿಂಗ್ ಅಧ್ಯಯನ ಈ ಸಂಗತಿಯನ್ನು ತಿಳಿಸಿದೆ.
ಸಂಶೋಧಕರು 214 ಯುವಕ-ಯುವತಿಯರ ತಳಮಳಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ವೇಳೆ ಇವರಿಗೆ ತಮ್ಮ ಸಂಗಾತಿಗೆ ಇರಬೇಕಾದ ನಾಲ್ಕು ಗುಣಲಕ್ಷಣಗಳ ಬಗ್ಗೆ ಕೇಳಲಾಗಿತ್ತು. ಬುದ್ಧಿವಂತಿಕೆ, ಸರಳತೆ, ಕರುಣೆ ಮತ್ತು ದೇಹ ಸೌಂದರ್ಯ ಈ ನಾಲ್ಕು ವ್ಯಕ್ತಿತ್ವದಲ್ಲಿ ನಿಮ್ಮ ಸಂಗಾತಿಯಲ್ಲಿ ನೀವು ಬಯಸುವುದೇನು ಎಂಬ ಪ್ರಶ್ನೆ ನೀಡಲಾಗಿತ್ತು.
ಸಂಭಾವ್ಯ ಸಂಗಾತಿಯು ಎಷ್ಟು ಬುದ್ದಿವಂತರಾಗಿದ್ದರೆ ನಿಮ್ಮನ್ನು ಆಕರ್ಷಿಸುತ್ತಾರೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರವಾಗಿ ಶೇ.1 ರಷ್ಟು, ಶೇ.10, ಶೇ.25, ಶೇ.25, ಶೇ.50, ಶೇ.75, ಶೇ.90 ಮತ್ತು ಶೇ.99ರಷ್ಟು ಆಯ್ಕೆಗಳನ್ನು ನೀಡಲಾಗಿತ್ತು. ಹಾಗೆಯೇ ಸರಳತೆ, ಕರುಣೆ ಮತ್ತು ದೇಹ ಸೌಂದರ್ಯಕ್ಕೂ ಇದೇ ಪ್ರಶ್ನೆಯನ್ನು ಯುವ ಸಮೂಹದ ಮುಂದಿಡಲಾಗಿತ್ತು . ಆದರೆ ಇದಕ್ಕೆ ಉತ್ತರಿಸಿದ ಶೇ.90 ರಷ್ಟು ಯುವಕ-ಯುವತಿಯರು ತಮ್ಮ ಸಂಗಾತಿಗೆ ದೇಹ ಸೌಂದರ್ಯ ಮತ್ತು ಕರುಣೆ ಇದ್ದರೆ ಸಾಕೆಂದು ತಿಳಿಸಿದ್ದಾರೆ.
ಇದೇ ಅಧ್ಯಯನದಲ್ಲಿ ತಮ್ಮ ಸಂಗಾತಿಯ ಆಯ್ಕೆಯಲ್ಲಿ ಹುಡುಗಿಯರು ಕರುಣೆ ಮತ್ತು ಬುದ್ದಿವಂತಿಕೆ ಕಡೆ ಪುರುಷರಿಗಿಂತ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದು ಸಾಬೀತಾಗಿದೆ.