ಫೇಸ್ ಬುಕ್ ಪಾಸ್ ವರ್ಡ್ ಕೊಡದೇ ಜೈಲು ಪಾಲಾದ..!

Date:

ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತಹ ಪೊಲೀಸರೊಂದಿಗೆ ಫೇಸ್​ಬುಕ್ ಪಾಸ್​ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವಕ ಜೈಲು ಸೇರಿದ ಘಟನೆ ಲಂಡನ್​ನಲ್ಲಿ ನಡೆದಿದೆ. ಶಾಲಾ ಬಾಲಕಿಯೊಬ್ಬಳ ಸಾವಿನ ಪ್ರಕರಣ ತನಿಖೆಗೆ ಈ ಶಂಕಿತ ಯುವಕ ತಡೆಯೊಡ್ಡಿರುವ ಹಿನ್ನಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

13 ವರ್ಷದ ಶಾಲಾ ಬಾಲಕಿ ಲೂಸಿ ಮೆಕ್ಹಗ್ ಅವರನ್ನು ಇತ್ತೀಚೆಗೆ ಇರಿದು ಹತ್ಯೆಗೈಯಲಾಗಿತ್ತು. ಈ ಸಂಬಂಧ ಸ್ಟೀಫನ್ ನಿಕೋಲಸ್​ ಎಂಬ ವ್ಯಕ್ತಿಯ ಮೇಲೆ ಪೊಲೀಸರಿಗೆ ಸಂಶಯ ಮೂಡಿತ್ತು. ಈ ಬಗ್ಗೆ ಪರಿಶೀಲಿಸಲು ಸಾಮಾಜಿಕ ತಾಣ ಫೇಸ್​ಬುಕ್ ಪಾಸ್​ವರ್ಡ್​​ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಆದರೆ ತನ್ನ ಪಾಸ್​ವರ್ಡ್​ ಶೇರ್ ಮಾಡಲು ಸ್ಟೀಫನ್ ನಿರಾಕರಿಸಿದ್ದಾನೆ. ಹೀಗಾಗಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ನಿರ್ಧರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಅಂತ ತಿಳಿದುಬಂದಿದೆ.
ಬಾಲಕಿ ಮತ್ತು ಸ್ಟೀಫನ್ ನಡುವೆ ಯಾವುದಾದರೂ ಸಂಬಂಧವಿತ್ತೇ?, ತನ್ನ ಸಾಮಾಜಿಕ ತಾಣದಿಂದ ಖಾಸಗಿ ಸಂದೇಶಗಳನ್ನು ಲೂಸಿ ಮೆಕ್ಹಗ್​ಗೆ ಕಳುಹಿಸಿದ್ದಾನೆಯೇ? ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಸ್ಟೀಫನ್​ನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದೇ, ವಿಚಾರಣೆಗೆ ಸಹಕರಿಸದೇ ಇರುವುದರಿಂದ ತನಿಖಾ ನಿಯಮಗಳ ಕಾನೂನಡಿಯಲ್ಲಿ ದೋಷಿ ಎಂದು ಪರಿಗಣಿಸಿರುವ ಕೋರ್ಟ್ ಸ್ಟೀಫನ್​ಗೆ ​ 14 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

Share post:

Subscribe

spot_imgspot_img

Popular

More like this
Related

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಕ್ರಿಯೆ

ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ: ಇಂದು ಭಾಲ್ಕಿಯಲ್ಲಿ ಅಂತಿಮ ದರ್ಶನ,...