ನೀವು ಮದ್ಯ ವ್ಯಸನಿಗಳಾಗಿದ್ದಲ್ಲಿ ಖಂಡಿತಾ ಇದನ್ನು ಓದಲೇ ಬೇಕು. ಯಾಕಂದ್ರೆ ನೀವು ಮದ್ಯ ವ್ಯಸನಿ ಆಗಿದ್ದರೆ ಆದಷ್ಟು ಬೇಗ ನಿಮ್ಮ ಸಾವು ಇದೆ ಎಂದರ್ಥ.
ಪ್ರತಿನಿತ್ಯ ಒಂದು ಗ್ಲಾಸ್ ವೈನ್ ಸೇವಿಸಿದರೂ ಕೂಡ ಸಾವಿಗೆ ಹತ್ತಿರ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ದಿನನಿತ್ಯ ವೈನ್ ಸೇವಿಸುವವರಲ್ಲಿ ಶೇ.20ರಷ್ಟು ಬೇಗ ಸಾವು ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಮೆರಿಕದ ಮೆಡಿಸಿನ್ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಹೊಸ ಸಂಶೋಧನೆ ನಡೆಸಿದ್ದು, ದಿನನಿತ್ಯ ವೈನ್ ಕುಡಿಯುವುದರಿಂದ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ನಾನಾ ರೋಗಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಹಿಂದೆ ಮದ್ಯಪ್ರಿಯರು ದಿನಕ್ಕೆ ಒಂದು ಅಥವಾ ಎರಡು ಪೆಗ್ಗಳನ್ನು ತೆಗೆದುಕೊಂಡರೆ ಯಾವುದೇ ತೊಂದರೆಯಿಲ್ಲ ಎಂದು ಕೆಲ ಅಧ್ಯಯನಗಳು ತಿಳಿಸಿದ್ದವು. ಆದರೆ, ಈಗಿನ ಅಧ್ಯಯನದಿಂದ ಒಂದೇ ಒಂದು ಗ್ಲಾಸ್ ವೈನ್ ಕುಡಿದ್ರೂ ಸಾವು ಹತ್ತಿರ ಆಗುತ್ತೆ ಎಂದು ಹೇಳಿದೆ.