ತನ್ನ ಇಬ್ಬರು ಮಕ್ಕಳಿಗೆ ಊಟದ ಬದಲು ಸದಾ ಕೋಕಾಕೋಲ ಕುಡಿಸುತ್ತಿದ್ದ ಮದ್ಯ ವ್ಯಸನಿ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ಫ್ರಾನ್ಸ್ ನಲ್ಲಿ ನಡೆದಿದೆ.
ಓದಲು, ಬರೆಯಲು, ಎಣಿಕೆ ಮಾಡಲು ಸಹ ಬಾರದ ಈ ಅವಿದ್ಯಾವಂತ ತನ್ನ ಕುಡಿತದ ಚಟಕ್ಕೆ ಎಷ್ಟು ವ್ಯಯ ಮಾಡುತ್ತಿದ್ದೆನೆಂಬ ಅಂದಾಜು ಕೂಡ ಇಲ್ಲದೇ ತನ್ನ ಗಳಿಕೆಯ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದಾನೆ ಎಂದು ಮಕ್ಕಳ ಪರ ವಕೀಲರು ತಿಳಿಸಿದ್ದಾರೆ.
ಕುಟುಂಬ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಕಾರಣದಿಂದ ಕೋಕಾ ಕೋಲವನ್ನು ಕುಡಿಸುತ್ತಿದ್ದ. ಅಲ್ಲದೇ ಹೆಂಡತಿ ಮಕ್ಕಳ ಮೇಲೆ ಆತನ ಹಲ್ಲೆ ಕೂಡ ಮಾಡುತ್ತಿದ್ದ ಎಂದು ಆರೋಪಿಸಿ ಮೂರು ತಿಂಗಳ ಮಟ್ಟಿಗೆ ಜೈಲಿಗೆ ಕಳುಹಿಸಲಾಗಿದೆ.
ಸದಾ ಕೋಕಾಕೋಲ ಕುಡಿಸುತ್ತಿದ್ದ ಕಾರಣ ನಾಲ್ಕು ವರ್ಷದ ಮೊದಲ ಮಗುವಿನ ಹಲ್ಲು ಸಂಪೂರ್ಣ ಹಾಳಾಗಿದ್ದು, ಮೂರು ವರ್ಷದ ಎರಡನೇ ಮಗು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.
ಕುಡುಕನ ಮನೆಗೆ ಭೇಟಿ ನೀಡಿದಾಗ ಆತನ ಮನೆಯಲ್ಲಿ ಫ್ರಿಡ್ಜ್, ಆಗಲಿ ಮಕ್ಕಳು ಮಲಗಲು ಹಾಸಿಗೆ, ಮಕ್ಕಳಿಗೆ ಆಟಿಕೆ ಯಾವುದು ಇಲ್ಲ. ಮಕ್ಕಳು ಹಸಿವು ಎಂದಾಗ ಕೇವಲ ಕೇಕ್ ಮತ್ತು ಕೋಕಾಕೋಲ ನೀಡುತ್ತಿದ್ದ ಈತ ಎಂದು ಪೊಲೀಸರು ತಿಳಿಸಿದ್ದಾರೆ.