ಹಬ್ಬದ ಪ್ರಯುಕ್ತ ಬಿಎಸ್ಎನ್ಎಲ್ ಮೆಗಾ ರೀಚಾರ್ಜ್ ಪ್ಲಾನ್ವೊಂದನ್ನು ಜಾರಿಗೆ ತಂದಿದೆ. ಈ ಪ್ಲಾನಿನಲ್ಲಿ ಗ್ರಾಹಕರಿಗೆ ಶೇ. 75 ರಿಯಾಯಿತಿ ನೀಡಲಿದೆ.
ಈ ಆಫರ್ನ್ನು ಕೇವಲ ಹೊಸ ಸಿಮ್ ಬಳಕೆದಾರರಿಗೆ ನೀಡಲಾಗಿದೆ. ಇದಕ್ಕಾಗಿ ನೀವು BSNL ಸಿಮ್ನ್ನು ಪಡೆಯಬೇಕಾಗುತ್ತದೆ. ನಂತರ ನೀವು IOCL/HPCLನ ಅಡುಗೆ ಅನಿಲ ಸಿಲಿಂಡರ್ನ ಗ್ರಾಹಕರಾಗಿದ್ದರೆ ನಿಮಗೆ LPG ಬಿಲ್ನೊಂದಿಗೆ ಒಂದು ಕೂಪನ್ ನೀಡಲಾಗುತ್ತದೆ. ಆ ಕೂಪನ್ ಮೂಲಕ ನೀವು ಈ ಆಫರ್ನ್ನು ಪಡೆಯಬಹುದು.
ಬಿಎಸ್ಎನ್ಎಲ್ ಕಂಪನಿಯು ಆಗಸ್ಟ್ನಲ್ಲಿ ತನ್ನ ಗ್ರಾಹಕರಿಗೆ ಪರಿಚಯಿಸಿದ 399 ರೂ. ರಿಚಾರ್ಜ್ ಯೋಜನೆ ಇದಾಗಿದೆ. ಇದನ್ನು ನೀವು ಮೆಗಾ ಆಫರ್ ಕೂಪನ್ ಸಹಾಯದಿಂದ ರೀಚಾರ್ಜ್ ಮಾಡಿದರೆ ಕೇವಲ 100 ರೂ. ಪಾವತಿಸಿದರೆ ಸಾಕಾಗುತ್ತದೆ. ಅಂದರೆ ಇಲ್ಲಿ ನಿಮಗೆ 299 ರೂ. ಡಿಸ್ಕೌಂಟ್ ನೀಡಲಾಗುತ್ತದೆ.
BSNLನ 399 ರೂ. ರಿಚಾರ್ಜ್ ಮೇಲೆ ನಿಮಗೆ 74 ದಿನಗಳ ವಾಲಿಟಿಡಿ ಸಿಗುತ್ತದೆ. ಅಲ್ಲದೆ ಪ್ರತಿದಿನ 100 SMS ಮತ್ತು 1GB ಡೇಟಾ ಸೌಲ್ಯಭ್ಯವನ್ನು ನೀಡಲಾಗುತ್ತದೆ. ಇದರೊಂದಿಗೆ ಅನಿಯಮಿತ ಕರೆ ಮತ್ತು ರೋಮಿಂಗ್ನಲ್ಲೂ ಕರೆ ಮಾಡುವ ಅವಕಾಶ ಒದಗಿಸಲಾಗುತ್ತದೆ. ಈ ಮೆಗಾ ಆಫರ್ನ್ನು ನೀವು ಬಳಸಿಕೊಂಡರೆ ಕೇವಲ 100 ರೂ.ಗೆ 72GB ಇಂಟರ್ನೆಟ್ ಡೇಟಾ ಪಡೆದುಕೊಳ್ಳಬಹುದು.
ಈ ಸ್ಪೆಷಲ್ ಆಫರ್ನ್ನು 7 ರಾಜ್ಯಗಳಿಗೆ ಸೀಮಿತಗೊಳಿಸಲಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದ BSNL ಗ್ರಾಹಕರು ಈ ಮೆಗಾ ಆಫರ್ ರಿಚಾರ್ಜ್ ಮಾಡಿಕೊಳ್ಳಬಹುದು. ಆದರೆ ಕರ್ನಾಟಕ ಸೇರಿದಂತೆ ದಕ್ಷಿಣದ ಯಾವುದೇ ರಾಜ್ಯಗಳಿಗೆ ಈ ಆಫರ್ ನೀಡಲಾಗಿಲ್ಲ.