ಲವ್ , ಇದು ಪ್ರತಿಯೊಬ್ಬರ ಜೀವನದಲ್ಲೂ ಮಾಮೂಲಿ. ಲವ್ ಆಗುವುದು, ಬ್ರೇಕಪ್ ಆಗುವುದು ಎಲ್ಲಾ ಕಾಮನ್.
ಪ್ರೀತಿ ಹೇಗೆ ಹುಟ್ಟುತ್ತೆ ಎಂದು ಗೊತ್ತಾಗುವುದಿಲ್ಲವೋ? ಅದೇರೀತಿ ಹೇಗೆ ಬ್ರೇಕಪ್ ಆಗುತ್ತದೆ ಎಂದೂ ಕೂಡ ಹೇಳಲಾಗಲ್ಲ.
ಎಲ್ಲರೂ ಲವ್ವರನ್ನೇ ಮದ್ವೆ ಆಗ್ತೀವಿ ಅನ್ನೋದು ಸುಳ್ಳು. ಕೆಲವರು ಮಾತ್ರ ಪ್ರೀತಿಸಿದವರನ್ನೇ ಮದ್ವೆ ಆಗೋ ಯೋಗ ಹೊಂದಿರ್ತಾರೆ.
ಲವ್ ಯಕ್ಕುಟ್ಟು ಹೋಗಿ ಮನೆಯಲ್ಲಿ ತೋರಿಸಿದ ಹುಡ್ಗಿಯನ್ನೋ ಅಥವಾ ತಮಗಾದ ಎರಡನೇ ,ಮೂರನೇ ಲವ್ವರನ್ನೋ ಕಟ್ಟಿಕೊಳ್ಳಲು ಮುಂದಾದಾಗ ಎಲ್ಲಿ ಹಳೇ ಲವ್ ಗೊತ್ತಾದಾಗ ತೊಂದ್ರೆ ಆಗುತ್ತಾ ಎಂದು ಮುಚ್ಚಿಡೋರು ತುಂಬಾ ಜನ.
ಆದರೆ, ಯಾವುದೇ ಕಾರಣಕ್ಕೂ ಮದುವೆ ಆಗುವ ಹುಡುಗಿ/ ಹುಡಗನಲ್ಲಿ ನಿಮ್ಮ ಎಕ್ಸ್ ಲವ್ ಸ್ಟೋರಿ ಮುಚ್ಚಿಡಲೇ ಬೇಡಿ. ನೀವು ಮೊದಲೇ ಹೇಳಿ ಕೊಂಡರೆ ಒಳ್ಳೆಯದು . ಆಮೇಲೆ ಹೇಗೋ ನಿಮ್ಮವರಿಗೆ ತಿಳಿಯಿತೆಂದರೆ ಕಷ್ಟ. ಇದು ಹುಡುಗ , ಹುಡುಗಿ ಇಬ್ಬರಿಗೂ ಅನ್ವಯ ಆಗುತ್ತದೆ.