ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಚಾಲೆಂಜ್ ಸ್ವೀಕರಿಸಿ ವಿಷ ಕುಡಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಗನೂರು ಗ್ರಾಮದಲ್ಲಿ ನಡೆದಿದೆ.
ದಿವ್ಯ ಎಂಬ 19 ವರ್ಷದ ಯುವತಿ ಮೃತೆ. ಹರೀಶ್ ಎಂಬ 20 ವರ್ಷದ ಯುವಕ ಚಾಲೆಂಜ್ ಮಾಡಿ ಪ್ರೇಯಸಿಯ ಸಾವಿಗೆ ಕಾರಣನಾದವ.
ದಿವ್ಯ ಮತ್ತು ಹರೀಶ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಎಂದಿನಂತೆ ಭೇಟಿಯಾದಾಗ ಹರೀಶ್ ನಿನಗೆ ನನ್ನ ಮೇಲೆ ನಿಜಕ್ಕೂ ಪ್ರೀತಿ ಇದ್ದರೆ ವಿಷ ಕುಡಿ ಅಂದಿದ್ದಾನೆ. ಆ ಚಾಲೆಂಜ್ ಸ್ವೀಕರಿಸಿದ ದಿವ್ಯ ವಿಷ ಕುಡಿದಿದ್ದಾಳೆ. ಬಳಿಕ ಮನೆಗೆ ಹೋದವಳೇ ವಾಂತಿ ಮಾಡಿಕೊಳ್ಳಲು ಶುರುಮಾಡಿದ್ದಾಳೆ. ಕೂಡಲೇ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಒಂದು ದಿನ ಸಾವ ಬದುಕಿನ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.
ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.