ಕನ್ನಡ ದೃಶ್ಯ ಮಾಧ್ಯಮ ಲೋಕದ ಫೈರ್ ಬ್ರಾಂಡ್ ಜರ್ನಲಿಸ್ಟ್ ಚಂದನ್ ಶರ್ಮಾ. ಇವರು ತೆರೆ ಮೇಲೆ ಬರ್ದೆ ಬಹಳಾ ಸಮಯ ಆಗಿದೆ. ಬಿಟಿವಿ ಬಳಿಕ ಸ್ವಲ್ಪ ದಿನ ಟಿವಿ9 ಪರದೆಯಲ್ಲಿ ಕಾಣಿಸಿಕೊಂಡಿದ್ದ ಚಂದನ್ ಶರ್ಮಾ ಹೆಚ್ಚು ಕಮ್ಮಿ ಹತ್ತು ತಿಂಗಳಿಂದ ಯಾವ ಚಾನಲ್ ಪರದೆ ಮೇಲೂ ಕಾಣಿಸಿಕೊಂಡಿರ್ಲಿಲ್ಲ. ಈಗ ಚಂದನ್ ಪವರ್ ಫುಲ್ ಆಗಿ ಎಂಟ್ರಿ ಕೊಡ್ತಾ ಇರೋದು ನಿಮ್ಗೆ ಗೊತ್ತೇ ಇದೆ. ಚಂದನ್ ಅವರ ಸಾರಥ್ಯದ ‘ಪವರ್ ಟಿವಿ’ ಅಕ್ಟೋಬರ್ 19ರಂದು ಲಾಂಚ್ ಆಗಿರುವುದೂ ಕೂಡ ನಿಮ್ಗೆ ಗೊತ್ತು. ಇದೀಗ ನವೆಂಬರ್ 5ರ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಈ ಹೊಸ ನ್ಯೂಸ್ ಚಾನಲ್ ನಿಮ್ಮ ಮುಂದೆ ಬರ್ತಿದೆ. ಇದರೊಂದಿಗೆ ಚಂದನ್ ಶರ್ಮಾ ಮತ್ತೆ ತೆರೆಯಲ್ಲಿ ಕಾಣಿಸಿಕೊಳ್ತಿದ್ದಾರೆ.
ಪವರ್ ಟಿವಿ ಆರಂಭದಲ್ಲೇ ಒಂದು ವೇಗವಿದೆ. ಹೀಗೊಂದು ಚಾನಲ್ ಲಾಂಚ್ ಆಗುತ್ತದೆ ಅನ್ನೋ ಮಾತು ಕೇಳಿ ಬರುವಷ್ಟರಲ್ಲೇ ಚಾನಲ್ ಲೋಕಾರ್ಪಣೆ ಆಗಿದ್ದು ನಿಜಕ್ಕೂ ಇತಿಹಾಸವೇ ಸರಿ. ಸೋಮವಾರ (ನಾಳೆ) ಸಂಜೆ 6 ಗಂಟೆಗೆ ವಿಚಾರ ಮಂಥನ ಆರಂಭವಾಗಲಿದೆ. ಈ ಸಮಿಟ್ ನಲ್ಲಿ ದೇಶದ ಹೆಮ್ಮೆಯ ಯೋಧರು, ಶಿಕ್ಷಣ ತಜ್ಱರು, ಪೊಲೀಸ್ ಅಧಿಕಾರಿಗಳು, ಹಿರಿಯ ಪತ್ರಕರ್ತರು, ರಾಜಕಾರಣಿಗಳು, ಚಿತ್ರರಂಗದವರು, ರಂಗಭೂಮಿಯ ದಿಗ್ಗಜರು, ವೈದ್ಯರು, ಸಮಾಜ ಸೇವಕರು, ರೈತರು ಹೀಗೆ ವಿವಿಧ ಕ್ಷೇತ್ರದವರು ಪಾಲ್ಗೊಳ್ಳುತ್ತಾರೆ. ಈ . ಗಣ್ಯರ ಸಲಹೆ, ಅಭಿಪ್ರಾಯಗಳನ್ನ ದಾಖಲಿಸಿಕೊಂಡು ಬಲಿಷ್ಠವಾಗಿ ಮುನ್ನುಗ್ಗುವ ವಿಶ್ವಾಸದಲ್ಲಿದೆ ಪವರ್ ಟಿವಿ.
ಚಂದನ್ ಶರ್ಮಾ ಪವರ್ ಟಿವಿಯ ಸಾರಥಿ ಆಗಿರೋದ್ರಿಂದ ನಿರೀಕ್ಷೆ ಬಹಳಾ ಇದೆ. ಚಂದನ್ ಅತ್ಯಂತ ಅಲ್ಪಾವಧಿಯಲ್ಲಿ ಜನಪ್ರಿಯರಾದವರು. ಅತಿ ಕಿರಿಯ ವಯಸ್ಸಲ್ಲಿ ನ್ಯೂಸ್ ಚಾನಲೊಂದರ ನೇತೃತ್ವ ವಹಿಸಿಕೊಳ್ತಿದ್ದಾರೆ. ಹೊಸ ತಂಡ, ಹೊಸ ಹುರುಪಿನೊಂದಿಗೆ ಮಾಧ್ಯಮ ಲೋಕದಲ್ಲಿ ಕ್ರಾಂತಿ ಮಾಡಲು ಬರುತ್ತಿರುವ ಚಂದನ್ ಹಾಗೂ ಅವರ ಟೀಮ್ ಗೆ ಶುಭವಾಗಲಿ ಅಂತ ಹಾರೈಸೋಣ.
ವೆಬ್ ಸೈಟ್ : www.powertvnews.in
ಯೂಟ್ಯೂಬ್ : www.youtube.com/powertvnewsin
ಫೇಸ್ ಬುಕ್ : www.facebook.com/powertvnews
ಟ್ವೀಟರ್ : www.twitter.com/powertvnews