ದೀಪಾವಳಿ ಚಿನ್ನದಿಂದ ಚಿನ್ನದ ಉಡುಗೊರೆ ಸಿಕ್ಕಿದೆ. ಚಿನ್ನದ ದರದಲ್ಲಿ ಗಣನೀಯ ಇಳಿಕೆಯಾಗಿದೆ.
ಪ್ರತಿ 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆಯಾಗಿದೆ.
ಬೆಳ್ಳಿ ದರವೂ ಸಹ 300 ರೂ. ಇಳಿಕೆ ಕಂಡಿದೆ.
ಆದರೆ, ಇದಕ್ಕೆ ವಿರುದ್ಧವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.51 ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಶೇ.0.17 ರಷ್ಟು ಏರಿಕೆ ಕಂಡು, 14.77 ಅಮೆರಿಕನ್ ಡಾಲರ್ ಗೆ ಏರಿದೆ.
99.9 ಪರಿಶುದ್ಧ 10 ಗ್ರಾಂ. ಬಂಗಾರದ ಬೆಲೆಯಲ್ಲಿ 210 ರೂ. ಇಳಿಕೆ ಕಂಡಿದ್ದು ಮೂಲಕ ಚಿನ್ನದ ದರ 32,400 ರೂ. 99.5 ಪರಿಶುದ್ಧ 10 ಗ್ರಾಂ. ಬಂಗಾರಕ್ಕೆ 32,250 ರೂ.ಆಗಿದೆ.