ಸಾಕ್ಷರತಾ ಪರೀಕ್ಷೆಯಲ್ಲಿ 98 ಅಂಕಪಡೆದಿದ್ದ 96 ವರ್ಷದ ಕಾರ್ತಿಯಾಣಿ ಅಮ್ಮ ಅವರಿಗೆ ಕೇರಳ ಸರಕಾರ ಉಡುಗೊರೆ ರೂಪದಲ್ಲಿ ಲ್ಯಾಪ್‍ಟಾಪ್ ನೀಡಿದೆ.
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕಾರ್ತಿಯಾಣಿ ಅವರು ಕಂಪ್ಯೂಟರ್ ಕಲಿಯುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು.
ಕೇರಳ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಕಾರ್ತಿಯಾಣಿ ಅವರ ಮನೆಗೆ ಭೇಟಿ ನೀಡಿ, ಲ್ಯಾಪ್‍ಟಾಪ್ ನೀಡಿದ್ದಾರೆ.
ಕಾರ್ತಿಯಾಣಿ ಅವರ ಜೊತೆಗೆ ಸ್ವತಃ ಸಚಿವರೇ ಕೆಲ ಸಮಯ ಕುಳಿತು ಲ್ಯಾಪ್‍ಟಾಪ್ ಬಳಕೆ ಮಾಡುವ ಕುರಿತು ವಿವರಿಸಿದ್ದಾರೆ.
ಈ ಮೂಲಕ ಇಳಿ ವಯಸ್ಸಲ್ಲೂ ಕಾರ್ತಿಯಾಣಿ ಅವರ ಕಲಿಕೆಯ ತುಡಿತಕ್ಕೆ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿ, ಪ್ರೋತ್ಸಾಹ ನೀಡುತ್ತಿದೆ.