ಬೆಂಗಳೂರಿಗೆ ಡಾಲರ್ ಎಕ್ಸ್ ಚೇಂಜ್ ಮಾಡುವ ಗ್ಯಾಂಗ್ ಬಂದಿದೆ. ಇ ಗ್ಯಾಂಗ್ ಡಾಲರ್ ಗಳಲ್ಲಿ ಹಣ ಕೊಡುವುದಾಗಿ ಹೇಳಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಆಟೋ ಡ್ರೈವರ್ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದ್ದು ಕೆ.ಆರ್ ಮಾರ್ಕೆಟ್ ಈ ಗ್ಯಾಂಗಿನ ಅಡ್ಡವಾಗಿದೆ.
ವಿದೇಶಿ ಮಹಿಳೆಯೊಬ್ಬಳು ಕೃಷ್ಣೇಗೌಡ ಎಂಬ ಆಟೋ ಚಾಲಕಗೆ ಕೆ.ಆರ್ ಮಾರ್ಕೆಟ್ನಿಂದ ವಿವೇಕನಗರ ಚರ್ಚ್ ಬಳಿ ಕರೆದುಕೊಂಡು ಹೋಗುವಂತೆ ಹೇಳಿದ್ದಾಳೆ.
ನಂತರ ಬಾಡಿಗೆ ಕೊಡುವಾಗ ಡಾಲರ್ ಕೊಟ್ಟಿದ್ದಾಳೆ. ಕೃಷ್ಣೆ ಗೌಡ ಇದನ್ನು ಪ್ರಶ್ನೆ ಮಾಡಿದ್ರೆ ನಾವು ಕೆಲಸ ಮಾಡೋ ಜಾಗದಲ್ಲಿ ಡಾಲರೇ ಕೊಡೋದು ಅಂದಿದ್ದಾಳೆ. ನಂತರ ಆಕೆಯ ಮನವಿ ಮೇರೆಗೆ ಕೃಷ್ಣೆಗೌಡ ಎಂಜಿ ರೋಡ್ ಬಳಿ ಕರೆದೊಯ್ದು ಡಾಲರ್ ಎಕ್ಸ್ ಚೇಂಜ್ ಮಾಡಿ ಕೊಟ್ಟಿದ್ದಾರೆ.
ಬಳಿಕ ತನ್ನ ಹತ್ತಿರ ಇನ್ನೂ ಹೆಚ್ಚು ಡಾಲರ್ ಗಳಿವೆ ಎಕ್ಸ್ ಚೇಂಜ್ ಮಾಡಿಕೊಡುವಂತೆ ಆಕೆ ಕೃಷ್ಟೇಗೌಡಗೆ ರಿಕ್ವಸ್ಟ್ ಮಾಡಿದ್ದಾಳೆ. ಬಡತನದಿಂದ ದುಡ್ಡಿನ ಆಸೆಗೆ ಬಿದ್ದ ಕೃಷ್ಟೆಗೌಡ ಅದಕ್ಕೆ ಒಪ್ಪಿದ್ದಾರೆ.
ನನ್ನ ಹತ್ತಿರ 25 ಲಕ್ಷ ರೂ ಬೆಲೆ ಬಾಳುವಷ್ಟು ಡಾಲರ್ ಗಳಿವೆ.
ನೀವು ನಂಗೆ ₹ 2 ಲಕ್ಷ ಕೊಡಿ ಸಾಕು. ಉಳಿದ ಎಲ್ಲ ಡಾಲರುಗಳನ್ನು ನೀವೇ ಇಟ್ಟುಕೊಳ್ಳಿ ಎಂದು ಮಹಿಳೆ ಕೃಷ್ಣೇಗೌಡಗೆ ಹೇಳಿದ್ದಾಳೆ. ಕೃಷ್ಣೇಗೌಡ 25 ಲಕ್ಷ ರೂ ಬರುತ್ತೆ ಅನ್ನೋ ಆಲೋಚನೆಯಲ್ಲಿ, ಮನೆಯಲ್ಲಿದ್ದ ಒಡವೆ ಮಾರಿ ₹ 2 ಲಕ್ಷ ಹಣವನ್ನು ಹೊಂದಿಸಿದ್ದಾರೆ. ಮಹಿಳೆ ಹೇಳಿದಂತೆ ವಿವೇಕನಗರ ಚರ್ಚ್ ಬಳಿ ಹೋಗಿದ್ದಾರೆ.
ಅಲ್ಲಿಗೆ ಮಹಿಳೆಯ ತಮ್ಮಂದಿರು ಎಂದು ಹೇಳಿಕೊಂಡು ಇಬ್ಬರು ಬಂದು ಹಣ ಕೇಳಿದ್ದಾರೆ.ಮಹಿಳೆಗೆ ಕಾಲ್ ಮಾಡಿ ಕೇಳಿದಾಗ ಅವರು ತನ್ನ ಬ್ರದರ್ಸ್ ಎಂದಿದ್ದಾಳೆ. ಅವರ ಬಳಿಯೇ ಹಣ ಕೊಡುವಂತೆ ಹೇಳಿದ್ದಾಳೆ.
ಎರಡು ಬಟ್ಟೆಯಲ್ಲಿ ಗಂಟು ಕಟ್ಟಿ ತಂದ ಡಾಲರ್ಸ್ ತೋರಿಸಿ 2 ಲಕ್ಷ ರೂ ಪಡೆದಿದ್ದಾರೆ. ಆಟೋದಲ್ಲಿ ಕುಳಿತು ಕೃಷ್ಣ ಗೌಡ ಗಂಟು ಬಿಚ್ಚಿ ನೋಡಿದಾಗ ಅದ್ರಲ್ಲಿ ಮೇಲ್ಬಾಗದಲ್ಲಿ ಮಾತ್ರ ಡಾಲರ್ ಇದ್ದು, ಕೆಳಭಾಗದಲ್ಲಿ ವೇಸ್ಟ್ ಪೇಪರ್ ಗಳಿದ್ದವು. ಅದು ಗಮನಕ್ಕೆ ಬರುತ್ತಿದ್ದಂತೆ ಆ ವಿದೇಶಿಗರು ಕಾಲ್ಕಿತ್ತಿದ್ದರು. ಮಹಿಳೆ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.ಕೂಡಲೇ ಅವ್ರು ವಿವೇಕನಗರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ.