ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಅಪಾಯವನ್ನು ಕೂಡ ಶೀಘ್ರದಲ್ಲೇ ಎದುರಿಸಲಿದೆ.
.ಬೆಂಗಳೂರಿನ ಪರಿಸ್ಥಿತಿ ಕೈಮೀರಿ ಅಪಾಯದತ್ತ ಸಾಗುತ್ತಿದೆ. ಜನಸಂಖ್ಯೆಯ ಹೆಚ್ಚಳದ ಜೊತೆಗೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಹಸಿರು ಕಣ್ಮರೆಯಾಗುತ್ತಿದೆ.
ಹೆಚ್ಚಾಗುತ್ತಿರುವ ವಾಹನದಿಂದ ಬೆಂಗಳೂರು ರಸ್ತೆಗಳನ್ನ ಅಗಲೀಕರಣ ಪ್ರತಿ ದಿನ ನಡಡೆಯುತ್ತಿದೆ. ಪ್ರತಿ ದಿನ ಮರಗಳ ಮಾರಣಹೋಮ ನಡೆಯುತ್ತಿದೆ. ಮರಗಳಿಂದ ತುಂಬಿದ್ದ ಜಯನಗರ ಸೇರಿದಂತೆ ಹಲವು ಪ್ರದೇಶಗಳು ಈಗ ಬರಿದಾಗಿದೆ. ರಸ್ತೆಗಳು ಅಗಲವಾಗಿದೆ. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ಮಾಲಿನ್ಯದಲ್ಲಿ ದೆಹಲಿಯನ್ನ ಹಿಂದಿಕ್ಕಿಲಿದೆ.
ಬೆಂಗಳೂರಿನಲ್ಲಿ ಪ್ರತಿ ದಿನ ಸರಾಸರಿ 1,900 ವಾಹನಗಳು ನೋಂದಾವಣಿಯಾಗುತ್ತಿದೆ. 70 ಲಕ್ಷಕ್ಕೂ ಅಧಿಕ ಬೆಂಗಳೂರು ರಿಜಿಸ್ಟ್ರೇಶನ್ ವಾಹನಗಳು ಓಡಾತ್ತಿದೆ. ಇನ್ನು ಕರ್ನಾಟಕದ ಇತರ ಭಾಗದಲ್ಲಿ ರಿಜಿಸ್ಟ್ರೇಶನ್ ಆಗಿರೋ ವಾಹನಗಳು, ಇತರ ರಾಜ್ಯಗಳ ವಾಹನಗಳು ಸೇರಿದರೆ ಬೆಂಗಳೂರಿನಲ್ಲಿರೋ ವಾಹನಗಳ ಸಂಖ್ಯೆ ಬರೋಬ್ಬರಿ 1 ಕೋಟಿ ದಾಟಲಿದೆ.
ಇದೀಗ ಈ ವಾಹನಗಳಿಗಾಗಿ ಬೆಂಗಳೂರಿನ ಮರಗಳನ್ನ ಕಡಿಯಲಾಗಿದೆ / ಕಡಿಯಲಾಗುತ್ತಿದೆ. ಈ ಮೂಲಕ ಮತ್ತಷ್ಟು ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇದೇ ಮಾಲಿನ್ಯಕ್ಕೆ ರಹದಾರಿಯಾಗುತ್ತಿದೆ.
ಮಾಲಿನ್ಯ ತಡೆಗೆ ಏನು ಮಾಡಬಹುದು?
*ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಬೇಕು.
* ಮೆಟ್ರೋ, ಬಿಎಂಟಿಸಿ ಬಸ್ ಪ್ರಯಾಣ ಮಾಡಲು ಉತ್ತೇಜನ ನೀಡಬೇಕು.
* ಹೆಚ್ಚುಕಮ್ಮಿ 6,000 ಸಾವಿರ ಬಸ್ಸುಗಳಿರುವ ಬಿಎಂಟಿಸಿ ಸಂಖ್ಯೆ ಹೆಚ್ಚಿಸಬೇಕು. ಎಲ್ಲಾ ಕಡೆಗಳಿಗೂ ಸಾರಿಗೆ ವ್ಯವಸ್ಥೆ ತಲುಪಿಸಬೇಕು. ಇನ್ನು ಮೆಟ್ರೋ ಕಾಮಾರಿಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.
*30 ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಸಾರಿಗೆ ವಾಹನ ವ್ಯವಸ್ಥೆ ಮಾಡಬೇಕು. 60ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಕಂಪೆನಿಗಳು ಬಿಎಂಟಿಸಿ ಸಾರಿಗೆ ವಾಹನದ ಜೊತೆ ಒಪ್ಪಂದ ಮಾಡಿಕೊಳ್ಳಬೇಕು.
*ಹೊಸ ವಾಹನಗಳ ಖರೀದಿ ಹಾಗೂ ರಿಜಿಸ್ಟ್ರೇಶನ್ ನಿಯಮ ಬಿಗಿಗೊಳಿಸಬೇಕು.
*ಉದ್ಯೋಗಕ್ಕೆ ತೆರಳುವ ಉದ್ಯೋಗಿಗಳು ಸಾರಿಗೆ ವಾಹನದಲ್ಲೇ ಪ್ರಯಾಣಿಸಬೇಕು.
*ತುರ್ತು ಅವಶ್ಯಕತೆ ಹೊರತು ಪಡಿಸಿ ಇತರ ಎಲ್ಲಾ ಕಾರ್ಯಗಳಿಗೂ ನಗರದಲ್ಲಿ ಸಾರಿಗೆ ಸಂಪರ್ಕವನ್ನೇ ಬಳಸಬೇಕು.