ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಟ್ರೇಲರ್ ಸದ್ದು ಮಾಡ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂನಲ್ಲಿಯೂ ಸಖತ್ ಸದ್ದು ಮಾಡ್ತಿದೆ.ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರೋ ಕೆಜಿಎಫ್ ಪಂಚ ಭಾಷೆಗಳಲ್ಲಿ ಸೌಂಡ್ ರಿಲೀಸ್ ಆಗಲಿದೆ. ಡಿಸೆಂಬರ್ 21ಕ್ಕೆ ಕೆಜಿಎಫ್ ತೆರೆಕಾಣೋದು ಫಿಕ್ಸ್ ಆಗಿದೆ.
ಇದು 80 ಕೋಟಿ ರೂ ಬಜೆಟ್ ಮೂವಿ.
ಕನ್ನಡದ ಇದುವರೆಗಿನ ಅತೀ ದೊಡ್ಡ ಬಜೆಟ್ ಸಿನಿಮಾ ಇದು.
ಸ್ಯಾಂಡಲ್ ವುಡ್ ನ ಟಾಪ್ 5 ಬಿಗ್ ಬಜೆಟ್ ಸಿನಿಮಾಗಳು
1) ಕೆಜಿಎಫ್ : ರಿಲೀಸ್ ಗೆ ಸಿದ್ದ ಇರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಜೆಟ್ 80 ಕೋಟಿ. ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಮೂವಿ.
2) ಕುರುಕ್ಷೇತ್ರ : ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ. ಈ ಸಿನಿಮಾದ ಅಂದಾಜು ಬಜೆಟ್ 65 ಕೋಟಿ ರೂ.
3) ದಿ ವಿಲನ್ : ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ, ಇತ್ತೀಚೆಗಷ್ಟೇ ತೆರೆಕಂಡ ‘ದಿ ವಿಲನ್ ‘ ಸದ್ಯದ ಸ್ಯಾಂಡಲ್ ವುಡ್ ನ 3ನೇ ಅತಿ ದೊಡ್ಡ ಬಿಗ್ ಬಜೆಟ್ ಮೂವಿ. ಇದರ ಬಜೆಟ್ 45 ಕೋಟಿ ರೂ.
4) ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ : 2012 ರಲ್ಲಿ ತೆರೆಕಂಡ ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡದ 4ನೇ ದೊಡ್ಡ ಬಜೆಟ್ ಸಿನಿಮಾವಾಗಿದೆ.ಈ ಸಿನಿಮಾದ ಬಜೆಟ್ 26 ಕೋಟಿ ರೂ.
5) ಮಾಣಿಕ್ಯ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 2014ರಲ್ಲಿ ತೆರೆಕಂಡ ಮಾಣಿಕ್ಯ ಕನ್ನಡದ 5ನೇ ಬಿಗ್ ಬಜೆಟ್ ಸಿನಿಮಾ.ಇದ್ರ ಬಜೆಟ್ 19 ಕೋಟಿ ರೂ.