ಢಾಕ : ಜಿಂಬಾಬ್ವೆ ವಿರುದ್ದದ 2ನೇ ಟೆಸ್ಟ್ ನಲ್ಲಿ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಫಸ್ಟ್ ಇನ್ನಿಂಗ್ಸ್‌ನಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಹೀಮ್ 421 ಬಾಲ್ ಗಳಲ್ಲಿ 18 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 219 ರನ್ ಸಿಡಿಸಿದ್ದಾರೆ. ಈ ದ್ವಿಶತಕದೊಂದಿಗೆ ಅಪರೂಪದ ರೆಕಾರ್ಡ್ ವೊಂದನ್ನು ಮಾಡಿದ್ದಾರೆ ಬಾಂಗ್ಲಾ ಕ್ರಿಕೆಟಿಗ.
ಪ್ರಸಕ್ತ ವರ್ಷದಲ್ಲಿ (2018) ಯಾವೊಬ್ಬ ಕ್ರಿಕೆಟರ್ ಕೂಡ ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಸಿಡಿಸಿಲ್ಲ. ಆ ಸಾಧನೆಯನ್ನು ರಹೀಂ ಮಾಡಿದ್ದಾರೆ.
ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ರೆಕಾರ್ಡ್ ಮಾಡುವ ವಿರಾಟ್ ಕೊಹ್ಲಿ ಕೂಡ ಈ ದಾಖಲೆ ಮಾಡಿಲ್ಲ.