ಟಿಪ್ಪು ಸುಲ್ತಾನ್ ನಿಂದ ನಮ್ಮಕುಟುಂಬ ತೊಂದರೆ ಅನುಭವಿಸಿದೆ. ಆದರೂ ಸರ್ಕಾರ ಏಕೆ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಗೊತ್ತಿಲ್ಲವೆಂದು ರಾಜಮಾತೆ ಪ್ರಮೋದಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತಾಡಿದ ಅವರು ನಮ್ಮ ಪೂರ್ವಜರು ನಮ್ಮ ಕುಟುಂಬಕ್ಕೆ ತೊಂದರೆ ಕೊಟ್ಟವರ ಬಗ್ಗೆ ಜಾಸ್ತಿ ಮಾತಾಡಬಾರದು ಅಂದಿದ್ದಾರೆ ಅದಕ್ಕೆ ಹೆಚ್ಚು ಮಾತಾಡಲ್ಲ ಎಂದು ಹೇಳಿದರು.
ರಾಜಕಾರಣ ಪ್ರವೇಶದ ಬಗ್ಗೆ ಮಾತಾಡಿದ ಅವರು ಜನಸೇವೆಗೆ ರಾಜಕಾರಣಕ್ಕೆ ಬರಬೇಕೆಂದಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ ಎಂದು ಹೇಳಿದರು.