ಜನವರಿಯಲ್ಲಿ ದರ್ಶನ್ ಅಭಿಮಾನಿಗಳಿಗೆ ಕೊಡ್ತಾರೆ ಡಬಲ್ ಧಮಾಕ..!! ಏನು ಗೊತ್ತಾ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗ್ತಿದ್ದಾರೆ.. ಒಂದಾದ ಮೇಲೆ ಒಂದರಂತೆ ಈ ಐರಾವತನ ಸಿನಿಮಾಗಳು ಶೂಟಿಂಗ್ ಮುಗಿಸಿ ತೆರೆಗೆ ಬರೋಕೆ ಸಿದ್ದವಾಗ್ತಿವೆ.. ಹೀಗಾಗೆ ಕುರುಕ್ಷೇತ್ರ, ಯಜಮಾನ ಪೈಪೋಟಿಗೆ ಬೀಳುವ ಸಾಧ್ಯತೆಗಳಿತ್ತು.. ಆದರೆ ಈಗ ಆ ಟೆನ್ಷನ್ ದೂರವಾಗಿದೆ..
ಕಾರಣ ಕುರುಕ್ಷೇತ್ರ ಹೊಸ ವರ್ಷದ ಹರುಷಕ್ಕೆ ಮತ್ತಷ್ಟು ಮೆರಗು ನೀಡಲ್ಲಿದ್ದು ಜನವರಿಯಲ್ಲಿ ತೆರೆಗೆ ಬರೋದು ಪಕ್ಕ ಆಗಿದೆ.. ಈ ಬಗ್ಗೆ ಸಿನಿಮಾ ನಿರ್ಮಾಪಕರಾದ ಮುನಿರತ್ನ ಅವರು ಹೇಳಿಕೆ ನೀಡಿದ್ದಾರೆ.. ಈ ಮೂಲಕ ಕೊನೆಗೂ ಕುರುಕ್ಷೇತ್ರ ಸಿನಿಮಾ ತೆರೆಗೆ ಬರೋಕೆ ಬೇಕಾದ ಸಿದ್ದತೆಯನ್ನ ಮಾಡಿಕೊಳ್ತಿದೆ…
ಇನ್ನೊಂದು ಕಡೆ ಇದೇ ಜನವರಿಯಿಂದ ಡಿ ಬಾಸ್ ಅಭಿನಯದ ಪ್ರತಿಷ್ಠಿತ ಸಿನಿಮಾ ಮದಕರಿಗೆ ಚಾಲನೆ ಸಿಗಲಿದೆ.. ಹೌದು, ಸುದೀಪ್ ಹಾಗೆ ದರ್ಶನ್ ಇಬ್ಬರು ಮದಕರಿನಾಯಕನ ಬಗ್ಗೆ ಪ್ರತ್ಯೇಕ ಸಿನಿಮಾ ಮಾಡ್ತಿದ್ದಾರೆ.. ಅದರಲ್ಲಿ ದರ್ಶನ್ ನಟಿಸಲಿರುವ ರಾಕ್ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಸಿದ್ದವಾಗಲಿರೋ ಈ ಸಿನಿಮಾ ಜನವರಿಗೆ ಸೆಟ್ಟೇರಲಿದೆ..
ಈ ಮೂಲಕ ದರ್ಶನ್ ಅವರ ಸಿನಿಮಾವೊಂದು ರಿಲೀಸಾದ್ರೆ ಮತ್ತೊಂದು ಸೆಟ್ಟೇರೋದು ಅಭಿಮಾನಿಗಳಿಗೆ ಖುಷಿ ನೀಡಿದೆ.. ಒಟ್ಟಿನಲ್ಲಿ ಹೊಸ ವರ್ಷಕ್ಕೆ ದಚ್ಚು ಫ್ಯಾನ್ಸ್ ಗಳಿಗೆ ಡಬಲ್ ಧಮಾಕ ಸಿಗಲಿರೋದಂತು ಸುಳ್ಳಲ್ಲ..