ಅಭಿಮಾನಿಗಳ ಕೋಪಕ್ಕೆ ಕಾರಣವಾಯ್ತು ಕಿಚ್ಚನ ಪೈಲ್ವಾನ್ ಪೋಸ್ಟರ್..!! ಅಸಲಿಗೆ ಆಗಿದ್ದೇನು ಗೊತ್ತಾ..?
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್.. ಕನ್ನಡದಲ್ಲಿ ಮೊದಲ ಬಾರಿಗೆ ಸುದೀಪ್ ಅಭಿನಯದಲ್ಲಿ ಮೂಡಿ ಬರ್ತಿರುವ ಹೈ ಬಜೆಟ್ ಸಿನಿಮಾ.. ಕನ್ನಡ ಮಾತ್ರವಲ್ಲದೆ 7 ಭಾಷೆಯಲ್ಲಿ ತೆರೆಗೆ ಬರೋಕೆ ಸಿದ್ದವಾಗಿರೋ ಅಭಿನಯ ಚಕ್ರವರ್ತಿಯ ಚಿತ್ರ ಈ ಪೈಲ್ವಾನ್..
ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಈ ಚಿತ್ರದ ಡೈರೆಕ್ಟರ್ ಕೃಷ್ಣ ನಿನ್ನೆ ಸಿನಿಮಾದ ಪೋಸ್ಟರ್ ಅನ್ನ ರಿವೀಲ್ ಮಾಡಿದ್ರು.. ಕಿಚ್ಚನ ಕಟ್ಟುಮಸ್ತು ದೇಹವನ್ನ ಕಂಡು ಪೋಸ್ಟರ್ ಗೆ ಉಘೆ ಉಘೆ ಅಂದೋರೆ ಹೆಚ್ಚು.. ಇದು ಬರೀ ಸ್ಯಾಂಪಲ್ ಅಷ್ಟೆ ಎನ್ನುವ ಮೂಲಕ ನಿರ್ದೇಶಕ ಬಿಡುಗಡೆಗೊಳಿದ ಈ ಪೋಸ್ಟರ್ ಆನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಯ್ತು..
ಈ ಪೋಸ್ಟರ್ ನೋಡುತ್ತಿದ್ದಂತೆ ಕೆಲ ಅಭಿಮಾನಿಗಳು ಕಿಚ್ಚನ ದೇಹವನ್ನ ಎಡಿಟ್ ಮಾಡಲಾಗಿದೆ ಎಂದ್ರು.. ಯಾರದ್ದೋ ದೇಹಕ್ಕೆ ಕಿಚ್ಚನ ಮುಖವನ್ನ ಅಂಟಿಸಲಾಗಿದೆ ಅಂತ ಕಾಮೆಂಟ್ ಮಾಡೋಕೆ ಶುರು ಮಾಡಿದ್ದಾರೆ.. ಆದರೆ ಈ ಬಗ್ಗೆ ಸಿನಿಮಾ ಟೀಮ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಇನ್ನೂ ಸ್ವತಃ ಕಿಚ್ಚ ಪೈಲ್ವಾನ್ ಆಗೋಕೆ ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರಿಳಿಸಿ ಬಾಡಿ ಬಿಲ್ಡ್ ಸಹ ಮಾಡಿದ್ದಾರೆ..