ವಿಜಯ್ ರಾಘವೇಂದ್ರ ‘ಕಿಸ್ಮತ್’ ಮೂಲಕ ಅಬ್ಬರಿಸಿ ಬಿಟ್ರು..

Date:

ವಿಜಯ್ ರಾಘವೇಂದ್ರಕಿಸ್ಮತ್ಮೂಲಕ ಅಬ್ಬರಿಸಿ ಬಿಟ್ರು..

ಲಕ್ಕಿದ್ರೆ ಭಿಕ್ಷಾಧಿಪತಿಯು ಕೋಟ್ಯಾಧಿಪತಿ ಆಗುತ್ತಾರೆ.. ಇದಕ್ಕೆ ಹೇಳೋದು ಕಿಸ್ಮತ್ ಅಂತ.. ಒಬ್ಬ ವ್ಯಕ್ತಿಯ‌ ಜೀವನದ ದಿಕ್ಕೆ ಬದಲಾಗುವ ಹಾಗೆ ಮಾಡುವ ತಾಕತ್ತು ಇರುವುದು ಈ‌ ಕಿಸ್ಮತ್ ಗೆ.. ಇದೇ ಎಳೆಯನ್ನ ಇಟ್ಟುಕೊಂಡು ಸಿದ್ದವಾಗಿರುವ ಸಿನಿಮಾ ಕಿಸ್ಮತ್..

ನಾಯಕ‌ ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸೇರಿದವನು.. ತನ್ನ ಮುಂದಿನ ತಂಗಿಯ ಮದುವೆ ಮಾಡಲು ಮುಂದಾಗ್ತಾನೆ.. ಇದಕ್ಕಾಗಿ ಬಡ್ಡಿ ಸುಳಿಯಲ್ಲಿ ಸಿಲುಕಿಕೊಳ್ತಾನೆ.. ಅಲ್ಲಿವರೆಗೂ ನಾರ್ಮಲ್ ಆಗಿದ್ದ ಲೈಫ್ ನಲ್ಲಿ ಬಿರುಗಾಳಿ ಏಳುತ್ತೆ.. ಈ ಸಾಲ‌ ತೀರಿಸಲು 4 ತಿಂಗಳ ಡೆಡ್ಲೈನ್ ಪಡೆದಿರುತ್ತಾನೆ.. ಈ ನಡುವೆ ಪ್ರೀತಿಸಿದ ಹುಡುಗಿ, ಅವರ ತಂದೆಯನ್ನ ಒಪ್ಪಿಸಲು ಆಗ ಪರಿಸ್ಥಿತಿ‌.. ಕೆಲಸ ಇಲ್ಲ, ದುಡ್ಡು ವಾಪಸ್ ಮಾಡೋಕೆ ಸಾಧ್ಯವಾಗೋದಿಲ್ಲ.. ಹೀಗೆ ಮುಂದೆ‌ ಸಾಗೋ ಸಿನಿಮಾ

ಫಸ್ಟ್ ಆಫ್ ಗಿಂತ ಸೆಕೆಂಡ್ ನಲ್ಲಿ ಸಿನಿಮಾದ ವೇಗ ಹೆಚ್ಚಾಗುತ್ತೆ.. ಯಾಕಂದ್ರೆ ಸಿನಿಮಾದಲ್ಲಿ ಟ್ವಿಸ್ಟ್ ಇರೋದೆ ಇಲ್ಲಿ.. ಈ ಮೂಲಕ ಪ್ರೇಕ್ಷಕರಿಗೆ ಹೊಸದೊಂದು ಥ್ರಿಲ್ಲಿಂಗ್ ಅನುಭವ ಶುರುವಾಗುತ್ತೆ.. ಚಿತ್ರಕಥೆಯ ವೇಗ ಹಾಗೆ ವಿಜಯ್ ರಾಘವೇಂದ್ರ ಅವರ ನಟನೆನಿರ್ದೇಶನ ಸಿನಿಮಾದ ಗತಿಯನ್ನ ಬದಲಿಸುತ್ತೆ.. ಕ್ಷಣದಿಂದ‌ ಕ್ಷಣಕ್ಕೆ ಚಿತ್ರದ ಮೇಲೆ ಇಂಟ್ರೆಸ್ಟ್ ಹೆಚ್ಚಾಗುತ್ತಾ ಸಾಗುತ್ತೆ.. ಕ್ಲೈಮೆಕ್ಸ್ ನಲ್ಲಿ ವಿಜಯ್ ರಾಘವೇಂದ್ರ ನಟನೆ ಅದ್ಭುತವಾಗಿದೆ.. ತಾಂತ್ರಿಕವಾಗಿ ಸಿನಿಮಾ ಮಜಾ ನೀಡುತ್ತೆ..

ಇನ್ನು ನಿರ್ದೇಶನದ ವಿಚಾರಕ್ಕೆ ಬರೋದಾದ್ರೆ ವಿಜಯ್ ರಾಘವೇಂದ್ರ ಉತ್ತಮ ಕೆಲಸ ಮಾಡಿದ್ದಾರೆ.. ಕಥೆಗೆ ಬೇಕಾದ ಪಾತ್ರಗಳ ಆಯ್ಕೆ, ಸಿನಿಮಾವನ್ನ ಪ್ರಸೆಂಟ್ ಮಾಡಿರುವ ರೀತಿ ಇಷ್ಟವಾಗುತ್ತೆ.. ರಾಜೇಶ್ ಮುರುಗನ್ ಮ್ಯೂಸಿಕ್ ಚಿತ್ರದ ಗತಿಗೆ ಒಪ್ಪುವಂತಿದೆ..

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...