ಈ ಬಾರಿ RCB ಪರ ಆಡಲಿರುವ ಇವರೆಲ್ಲ ಎಷ್ಟು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ..?
ಪ್ರತಿ ವರ್ಷದಂತೆ ಈ ವರ್ಷವು ಸಹ ಐಪಿಎಲ್ ಹಂಗಾಮಕ್ಕೆ ವೇದಿಕೆ ರೆಡಿಯಾಗ್ತಿದೆ.. ಹೀಗಾಗೆ ಪ್ರತಿಯೊಂದು ತಂಡವು ತಮ್ಮ ಟೀಮ್ ಗಳನ್ನ ಸ್ಟ್ರಾಂಗ್ ಮಾಡಿಕೊಳ್ಳುತ್ತಿವೆ.. ಇನ್ನೂ ಹಲವರನ್ನ ಟೀಮ್ ನಿಂದ ಕೈ ಬಿಟ್ಟು ಆರ್ ಸಿಬಿ ಫ್ರ್ಯಾಂಚೈಸ್ ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರಿಗೆ ಒಳ್ಳೆಯ ಸಂಭಾವನೆಯನ್ನೇ ನೀಡುತ್ತಿದೆ.. ಹಾಗಿದ್ರೆ ಯಾವ್ಯಾವ ಪ್ಲೇಯರ್ ಗೆ ಎಷ್ಟೆಷ್ಟು ಕೋಟಿ ನೀಡ್ತಿದೆ ಅನ್ನೋದ್ರ ವರದಿ ಈ ಕಳಗಿನಂತಿದೆ…
ಟೀಮ್ ನ ಕ್ಯಾಪ್ಟನ್ ವಿರಾಟ್ ಕೊಹ್ಲಿ 17 ಕೋಟಿ ಸಂಭಾವನೆಯನ್ನ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.. ಎಬಿಡಿ ವಿಲಿಯರ್ಸ್ 11 ಕೋಟಿ ಪಡೆದು ಎರಡನೇ ಸ್ಥಾನದಲ್ಲಿದ್ರೆ, ಇನ್ನುಳಿದಂತೆ ಮಾರ್ಕಸ್ ಸ್ಟೋಯಿನ್ಸ್ 6.2 ಕೋಟಿ, ಯಜುವೇಂದ್ರ ಜಾಹಲ್ 6 ಕೋಟಿ, ಉಮೇಶ್ ಯಾದವ್ 3.2 ಕೋಟಿ, ಸುಂದರ್ 3.2, ನವ್ ದೀಪ್ ಸೈನಿ 3 ಕೋಟಿ, ಸಿರಾಜ್ 2.6 ಕೋಟಿ, ಗ್ರ್ಯಾಂಡ್ ಹೋಮ್ 2.2 ಕೋಟಿ, ಕೌಲ್ಟರ್ನೈಲ್ 2.2 ಕೋಟಿ, ಮೋಯಿನ್ ಅಲಿ 1.7 ಕೋಟಿ, ಪಾರ್ಥಿವ್ ಪಟೇಲ್ 1.7 ಕೋಟಿ, ಪವನ್ ನೇಗಿ 1 ಕೋಟಿ, ಟೀಮ್ ಸೌಥಿ 1ಕೋಟಿ, ಕುಲ್ವಂತ್ ಖೇಜ್ರೋಲಿಯ 85 ಲಕ್ಷ ಪಡೆದುಕೊಂಡಿದ್ದಾರೆ..