ಧೋನಿ ದಾಖಲೆಗೆ ಗುನ್ನವಿಟ್ಟ ರಿಷಭ್ ಪಂತ್..!!
ಅಡಿಲೇಡ್ ನ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ವಿಕೆಟ್ ಕೀಪರ್ ಆದ ರಿಷಭ್ ಪಂತ್ ಹೊಸದೊಂದು ದಾಖಲೆಯನ್ನ ಮಾಡಿದ್ದಾರೆ.. ವೃದ್ಧಿಮಾನ್ ಸಹಾ ಅವರ ಅನುಪಸ್ಥಿತಿಯಿಂದ ತಂಡದಲ್ಲಿ ಸ್ಥಾನ ಪಡೆದಿರುವ 21ರ ಈ ಯುವ ಕ್ರಿಕೆಟಿಗ, ಧೋನಿಯ ದಾಖಲೆಯೊಂದನ್ನ ಮೆಟ್ಟಿನಿಂತಿದ್ದಾರೆ..ರಿಷಬ್ ಪಂತ್ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಗಳನ್ನ ಹಿಡಿಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ..ಈ ಹಿಂದೆ ಅಂದ್ರೆ 2009 ರಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವೆಲ್ಲಿಂಗ್ಟನ್ ನಲ್ಲಿ ಇದೇ ಆಸ್ಟ್ರೇಲಿಯಾ ತಂಡದ ವಿರುದ್ದವೆ ಒಂದೆ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಗಳನ್ನ ಹಿಡಿಯುವ ಮೂಲಕ ಈ ದಾಖಲೆಯನ್ನ ಮಾಡಿದ್ರು.. ಇನ್ನು ಟೆಸ್ಟ್ ನಲ್ಲಿ ಸ್ಥಾನ ಪಡೆದಿರುವ ರಿಷಬ್ 43.25ರ ಸರಾಸರಿಯಲ್ಲಿ 346 ರನ್ ಗಳನ್ನ ಗಳಿಸಿದ್ದು, ಇದರಲ್ಲಿ ಒಂದು ಶತಕ ಸೇರಿದೆ..